
ಬೆಂಗಳೂರು: ದಿನಾಂಕ:28-05-2025(ಹಾಯ್ ಉಡುಪಿ ನ್ಯೂಸ್)
ತಮಿಳು ನಟ ಕಮಲಹಾಸನ್ ಕನ್ನಡದ ಬಗ್ಗೆ ಕೇವಲವಾಗಿ ಮಾತಾಡಿ ತಮಿಳರನ್ನು ಓಲೈಸಿ ರಾಜಕೀಯ ಲಾಭ ಗಳಿಸುವ ಹುನ್ನಾರ ಮಾಡಿದ್ದಾರೆ.ಇದನ್ನು ನಾವು ಖಂಡಿಸುತ್ತೇವೆ ಎಂದು ಪ್ರವೀಣ್ ಶೆಟ್ಟಿ ಹೇಳಿದರು.
ಕನ್ನಡ ಭಾಷೆಯ ಬಗ್ಗೆ ಕೇವಲವಾಗಿ ಮಾತಾಡಿರುವ ಕಮಲಹಾಸನ್ ನ ಚಲನಚಿತ್ರ ರಾಜ್ಯ ದಲ್ಲಿ ಪ್ರದರ್ಶನ ನಡೆಸಲು ನಾವು ಅವಕಾಶ ಕೊಡುವುದಿಲ್ಲ. ಕಮಲಹಾಸನ್ ಚಿತ್ರಕ್ಕೆ ರಾಜ್ಯದಲ್ಲಿ ಬ್ಯಾನ್ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.