Spread the love

ಹೆಬ್ರಿ: ದಿನಾಂಕ 21/05/2025 (ಹಾಯ್ ಉಡುಪಿ ನ್ಯೂಸ್) ಬೆಳ್ಳಂಜೆ ಗ್ರಾಮದ ತುಂಬೆ ಜಡ್ಡು ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ಅಶೋಕ ಮಾಳಬಾಗಿ ಅವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಬಾಗಿ ಅವರಿಗೆ ದಿನಾಂಕ : 19-05-2025 ರಂದು ರಾತ್ರಿ ಬೆಳ್ಳಂಜೆ ಗ್ರಾಮ ತುಂಬೆಜಡ್ಡು ಎಂಬಲ್ಲಿರುವ ಮೋಹನ್‌ ದಾಸ್‌ ಎಂಬುವವರ ಮನೆಯ ಪಕ್ಕದಲ್ಲಿರುವ ಕಟ್ಟಡದಲ್ಲಿ ಕೆಲವೊಂದು ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಗಳ ಸಹಾಯದಿಂದ ಸಮಯ ಬೆಳಿಗಿನ ಜಾವ ದಾಳಿ ಮಾಡಿದ್ದಾರೆ .

ಪೊಲೀಸರು ದಾಳಿ ಮಾಡಿದಾಗ ಕಟ್ಟಡದಲ್ಲಿ 1) ತೇಜಸ್‌ , 2) ಪ್ರಜ್ವಲ್‌, 3) ಪ್ರವೀಣ್‌ ಎಂಬವರು ಲಾಭದ ಉದ್ದೇಶದಿಂದ ಗಾಂಜಾ ಮಾರಾಟ ಮತ್ತು ಅಕ್ರಮವಾಗಿ ಹಾಗೂ  ಕ್ರಿಕೇಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿರುವುದು ಕಂಡುಬಂದಿದ್ದು ಮೂವರನ್ನೂ ಪೊಲೀಸರು ಬಂಧಿಸಿದ್ದು ಸ್ಥಳದಲ್ಲಿ ರೂಪಾಯಿ 89,000/- ನಗದು ಹಣ , 08 ಮೊಬೈಲ್‌ ಪೋನ್‌ಗಳು ,07 ಎಟಿಎಂ ಕಾರ್ಡುಗಳು, 03 ಸಿಮ್‌ ಕಾರ್ಡುಗಳು, 2 ನೋಟ್‌ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾ ಸಿಕ್ಕಿದೆ ಎಂದು ದೂರಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 112 ಬಿಎನ್ಎಸ್‌, ಕಲಂ: 78 ಕೆಪಿ ಕಾಯ್ದೆ ಮತ್ತು 8(c) ,20(b) ಎನ್‌ ಡಿಪಿಎಸ್‌ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!