
ಉಡುಪಿ: ದಿನಾಂಕ: 21-05-2025 (ಹಾಯ್ ಉಡುಪಿ ನ್ಯೂಸ್) ಶಿರಿಬೀಡು ವಾರ್ಡಿನ ಇಷ್ಟ ಸಿದ್ಧಿ ವಿನಾಯಕ ರಸ್ತೆಯಲ್ಲಿ ಮಳೆಯ ನೀರು ಹರಿಯುವ ತೋಡಿನ ಹೂಳೆತ್ತದ ಕಾರಣ ತೋಡಿನಲ್ಲಿ ಕಸದ ರಾಶಿ ತುಂಬಿ ಬ್ಲಾಕ್ ಆಗಿ ನಿನ್ನೆ ಸುರಿದ ಮಳೆಯ ನೀರು ರಸ್ತೆಯ ಮೇಲೆ ಹರಿದು ಪರಿಸರದ ಮನೆಯೊಳಗೆ ನುಗ್ಗಿದೆ.
ಬನ್ನಂಜೆ ಬ್ರಹ್ಮ ಬೈದರ್ಕಳ ಗರಡಿಗೆ ಹೋಗುವ ರಸ್ತೆಗೆ ತಾಗಿಕೊಂಡಿರುವ ತೋಡಿನಲ್ಲಿ ಗಿಡಗಂಟಿಗಳು ಬೆಳೆದು ಕಸದ ರಾಶಿ ತುಂಬಿ ನೀರು ಬ್ಲಾಕ್ ಆಗಿದ್ದು ಮಳೆಯ ನೀರು ಪರಿಸರದ ಮನೆಯೊಳಗೆ ನುಗ್ಗಿ ಜನರಿಗೆ ತುಂಬಾ ಸಮಸ್ಯೆ ಉಂಟು ಮಾಡಿದೆ. ಈ ಕೂಡಲೇ ನಗರಸಭೆಯ ವತಿಯಿಂದ ಈ ತೋಡುಗಳಿಂದ ಹೂಳೆತ್ತುವ ಕೆಲಸವನ್ನು ಮಾಡಿ ಮುಂದಿನ ದಿನದಲ್ಲಿ ಈ ಪರಿಸರದಲ್ಲಿ ನೆರೆಯ ಹಾವಳಿ ಬಾರದಂತೆ ನಗರಸಭೆಯು ಕಾರ್ಯಚರಿಸಬೇಕಾಗಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಅವರು ಆಗ್ರಹಿಸಿದ್ದಾರೆ.


