Spread the love

ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಕುಂದರ್ ಇವರು ಸದ್ಯ ತಮ್ಮ ವಿರುದ್ಧ ಅವಿಶ್ವಾಸದ ನಿರ್ಣಯವನ್ನು ಕೈಗೊಳ್ಳದಂತೆ ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯಲ್ಲಿ ತಡೆಯಾಜ್ಞೆ ತಂದಿರುತ್ತಾರೆ. ಏಕ ಸದಸ್ಯ ಪೀಠದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಾಡದಂತೆ ಸುಮಾರು 14 ಜನರಿಗೆ ನೋಟಿಸನ್ನು ಜಾರಿ ಮಾಡಿಸಿರುತ್ತಾರೆ. ಬಾರಿ ಕುತೂಹಲ ಮೂಡಿಸಿದ್ದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಕೈಗೊಳ್ಳುವ ಬಗ್ಗೆ ಮೊದಲು ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳು ನಂತರ ಶ್ರೀನಿವಾಸ ಕುಂದರ್ ಆಮೇಲೆ ಬಿಜೆಪಿ ಬೆಂಬಲಿತ ನಿರ್ದೇಶಕರ ಕೋರಿಕೆಯಂತೆ 7/05/ 2025ರಂದು ತಮಗೆ ವಿಶ್ವಾಸ ಇಲ್ಲದ ಅಧ್ಯಕ್ಷರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಮತ್ತು ಅವಿಶ್ವಾಸ ನಿರ್ಣಯ ಕೈಗೊಳ್ಳುವ ಬಗ್ಗೆ ಸಂಘದ ಕಚೇರಿಯಲ್ಲಿ DR/AR ರವರ ಆದೇಶದ ಮೇರೆಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು.ಆದರೆ ತಾರೀಕು 05/05/ 2025 ರಂದೇ ಮಾನ್ಯ ಮಂಜುನಾಥ್ ಕುಂದರ್ ಹೈಕೋರ್ಟ್ ಮೆಟ್ಟಿಲೇರಿ ಏಕ ಸದಸ್ಯ ಪೀಠದ ಮೂಲಕ ತಮ್ಮ ಅಧ್ಯಕ್ಷ ಗಾದೆಯಿಂದ ಕೆಳಗೆ ಇಳಿಸದಂತೆ ಮತ್ತು ಇದು ಕಾನೂನು ಬಾಹಿರ ಎಂಬಂತೆ ನೋಟಿಸ್ ಅನ್ನು ಜಾರಿ ಮಾಡಿಸಿರುತ್ತಾರೆ.ಮಾನ್ಯ ಗೌರವಿತ ಹೈಕೋರ್ಟ್ ನ್ಯಾಯ ಪೀಠವು ಮಂಜುನಾಥ್ ಕುಂದಾರ್ ರವರ ಅರ್ಜಿಯನ್ನು ಪುರಸ್ಕರಿಸಿ ಈ ತಕ್ಷಣಕ್ಕೆ ಜಾರಿ ಬರುವಂತೆ ಅವಿಶ್ವಾಸ ನಿರ್ಣಯವನ್ನು ಕೈಗೊಳ್ಳದಂತೆ ತಡೆಯಾಜ್ಞೆಯನ್ನು ನೀಡಿರುತ್ತಾರೆ.ಬಾರಿ ಕುತೂಹಲ ಮೂಡಿಸಿದ್ದ ಅಧ್ಯಕ್ಷರ ನಿರ್ಣಯದ ಈ ಅವಿಶ್ವಾಸ ನಿರ್ಣಯದ ಸಭೆ ಈ ರೀತಿಯಾಗಿ ಕೊನೆಗೊಳ್ಳುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ.ಅಧ್ಯಕ್ಷರಾದ ಮಂಜುನಾಥ್ ಕುಂದರ್ ಇವರು ಮಾನ್ಯ ಹೈಕೋರ್ಟಿನ ಕದತಟ್ಟಿರುವುದು ಎಲ್ಲಾ ಸದಸ್ಯರಲ್ಲಿಯೂ ಕೂಡ ಬಾರಿ ಕುತೂಹಲ ಮೂಡಿಸಿದೆ.ಭಾರಿ ಭ್ರಷ್ಟಾಚಾರದಿಂದ ಕೂಡಿತ್ತು ಎನ್ನಲಾದ ಆಡಿಯೋ ಪ್ರಕರಣದ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಆಡಿಯೋದಲ್ಲಿರುವ ಧ್ವನಿಯೂ ಮಂಜುನಾಥ್ ಕುಂದರ್ ಅವರದ್ದೋ? ಅಥವಾ ಈ ದ್ವನಿಯನ್ನು ಎಡಿಟ್ ಮಾಡಲಾಗಿದೆಯೇ? ಎನ್ನುವುದರ ಬಗ್ಗೆ ಸಂಶಯ ಉಂಟಾಗಿ ಸಂಘದ ಸದಸ್ಯ ರಲ್ಲಿ ಭಾರಿ ಚರ್ಚೆ ನಡೆದಿರುತ್ತದೆ.

ಸಂಘದ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಅಕ್ಕಿ ಹಾಗೂ ಇತರ ಧವಸ ಧಾನ್ಯಗಳನ್ನು ಕದ್ದು ಮಾರಲಾಗುತ್ತಿದೆ ಎನ್ನುವುದರ ಬಗ್ಗೆ ಅಂದೇ ಸಂಶಯ ಭರಿತರಾಗಿದ್ದಂತಹ ಅಧ್ಯಕ್ಷೀಯ ಮಂಡಳಿಯ ಕೆಲವು ಸದಸ್ಯರುಗಳು ಹಾಗೂ ಸಂಘದ ಸದಸ್ಯರು ಸಂಘದಲ್ಲಿ ಆಗುತ್ತಿರುವಂತಹ ಕೆಲವು ಕೆಟ್ಟ ಸಂಪ್ರದಾಯಗಳಿಗೆ ಸಾಕ್ಷಿ ಸಮೇತ ಕ್ರೋಢಿಕರಿಸಿ ಅಂದೇ ಸಂಘದ ಸರ್ವ ಅಭಿವೃದ್ಧಿಯ ದೃಷ್ಟಿಯಿಂದ ತಿಲಾಂಜಲಿ ಇರಿಸಿ ಸಂಘದ ಧ್ಯೇಯ ಉದ್ದೇಶಗಳನ್ನು ಎತ್ತಿ ಹಿಡಿದಿದ್ದರು.
ಅಂದಿನ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸಮಕ್ಷಮ ಸಂಘದ ಹಿಂದಿನ ಕೆಲವು ಕೆಟ್ಟ ಸಂಪ್ರದಾಯಗಳಿಗೆ ತಿಲಾಂಜಲಿ ಹಾಕಿ ಮತ್ತದೇ ಹೊಸ ಹುಮ್ಮಸ್ಸಿನೊಂದಿಗೆ ಸಂಘದ ಏಳಿಗೆಗಾಗಿ ಎಲ್ಲರೂ ಶ್ರಮಿಸುತ್ತಿದ್ದರು. ಇಲ್ಲಿ ಭಾರಿ ವಿಶೇಷ ಏನೆಂದರೆ ಹೆಚ್ಚಿನದೆಲ್ಲವೂ ಕೂಡ ಸದ್ಯ ಸಂಘದ ಸದಸ್ಯರ ನಿರ್ದೇಶನದಂತೆ ಕಾನೂನು ಪ್ರಕಾರವೇ ನಡೆಯುವಂತೆ ಒತ್ತಡ ಇರುತ್ತದೆ.ಆದರೆ ಇಲ್ಲಿ ಕೆಲವೊಂದು ವಿಚಾರಗಳಲ್ಲಿ ಯಾಕೆ ಒಂದು ರೀತಿಯ ಸಂಶಯ ಉಂಟಾಗುತ್ತದೆ ಎನ್ನುವುದೇ ಬಹಳ ಕೌತುಕ.ಸಂಘದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಾಣಾಧಿಕಾರಿಗಳು ಮತ್ತು ಇತರ ಸದಸ್ಯರ ಹಾಗೂ ಎಲ್ಲಾ ನಿರ್ದೇಶಕರ ಆಣತಿಯ ಮೇರೆಗೆ ಉತ್ತಮವಾಗಿ ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗೆ ಯಾಕೆ ಈ ರೀತಿಯ ಸಂಶಯವು ಮೆತ್ತುತ್ತದೆ? ಎನ್ನುವುದು ಸಾರ್ವಜನಿಕರಲ್ಲಿ ಉಂಟಾದಂತಹ ಯಕ್ಷಪ್ರಶ್ನೆ.
ಸಂಘದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿ ಯಾವುದೇ ರೀತಿಯ ಫಲಾಫೇಕ್ಷೆ ಇಲ್ಲದೆ ಕೆಲಸ ಮಾಡುವಂತಹ ನಿರ್ದೇಶಕರ ಅಗತ್ಯತೆ ಇದೆ.ಇಲ್ಲಿ ಈ ಹಿಂದಿನಿಂದಲೂ ಅಪಸ್ವರ ತಗಾದೆ ತೆರೆಯಲು ಮುಖ್ಯ ಕಾರಣವಾದರೂ ಏನಿರ ಬಹುದು?ಉದ್ಯೋಗ ನೇಮಕಾತಿಯ ವಿಚಾರದಲ್ಲಿ ಇಲ್ಲಿ ಪದೇ ಪದೇ ದೊಡ್ಡ ಮಟ್ಟದಲ್ಲಿ ನಿರ್ದೇಶಕರ ಒಳಗೆ ಜಟಾ ಪಟಿ ಆಗಲು ಕಾರಣಗಳೇನು?ಇವೆಲ್ಲದರ ನಡುವೆ ಮುಖ್ಯ ಕಾರ್ಯ ನಿರ್ವಾಣಾಧಿಕಾರಿಯವರ ಜವಾಬ್ದಾರಿಯಲ್ಲಿ ಕೊರತೆ ಉಂಟೇ?ಹಾಗಾದರೆ ಬೇರೆ ಬೇರೆ ಸಂಘ ಸಂಸ್ಥೆಗಳು ನೂರಾರು ಕೋಟಿ ವಹಿವಾಟು ನಡೆಸುದ್ದಿಲ್ಲವೇ? ಪ್ರಾರಂಭದಲ್ಲಿಯೇ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ನೀಡುವ ಭರವಸೆಯಲ್ಲಿ ಜಾಹೀರಾತುಗಳ ಮೂಲಕ ಸಂಸ್ಥೆಗೆ ಉದ್ಯೋಗ ನೇಮಕಾತಿಯ ಅಗತ್ಯತೆ ಇದೆಯೇ ಎನ್ನುವುದು ಒಂದು ಕಡೆ ಪ್ರಶ್ನೆ ಯಾಗಿ
ಸಂಶಯ ಉಂಟಾದಾಗ ಅಧ್ಯಕ್ಷರ ಆಡಿಯೋ ಎನ್ನಲಾದಂತಹ ಭ್ರಷ್ಟಾಚಾರದ ಸಂಭಾಷಣೆಯ ಆಡಿಯೋ ಬಾರಿ ಚರ್ಚೆಗೆ ಗ್ರಾಸ ಆಗಿರುತ್ತದೆ.
ಒಟ್ಟಾರೆ ಸಂಘದ ಏಳಿಗೆಗಾಗಿ ಶ್ರಮಿಸಬೇಕಿದ್ದ ಆಡಳಿತ ಮಂಡಳಿಯ ಅಧ್ಯಕ್ಷರು ಇಂದು ತನ್ನ ಆಡಿಯೋ ಹೇಗೆ ಸಾಮಾಜಿಕವಾಗಿ ಹರಡಿದೆ ಎನ್ನುವುದರ ಬಗ್ಗೆ ತನ್ನದೇ ಹೇಳಿಕೆ ಜೊತೆ ವಿಮರ್ಶಿಸುವುದಲ್ಲದೆ ನೂರಾರು ಸದಸ್ಯರ ಹೇಳಿಕೆಗಳಿಗೂ ಕಿಮ್ಮತ್ತು ಇಲ್ಲದೆ ತನ್ನ ಅಧ್ಯಕ್ಷೀಯ ಅಧಿಕಾರವೇ ಇನ್ನೊಂದಷ್ಟು ಸಮಯ ತನಗಲ್ಲದೆ ಬೇರೆ ಯಾರಿಗೂ ಕೂಡ ದಕ್ಕು ದಕ್ಕಲು ಬಿಡಬಾರದು ಕಾನೂನಾತ್ಮಕವಾಗಿ ಹೋರಾಟಕ್ಕೆ ಇಳಿಯುತ್ತೇನೆ ಎಂದು ನಿರ್ಧರಿಸಿರುವುದು ವಿಶೇಷ.ಮಾನ್ಯ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿರುವುದು ಇಲ್ಲಿ ಇನ್ನೊಂದು ಭಾರಿ ವಿಶೇಷ.ಈ ಮೂಲಕ 7/05/ 2025 ರಂದು ನಡೆಯಬೇಕಿದ್ದ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮುಂದಿನ ಕೋರ್ಟ್ ಮತ್ತು ಇತರೆ ಕಾನೂನಾತ್ಮಕ ಬೆಳವಣಿಗೆಯೊಂದಿಗೆ ಮುಂದೆ ಸಾಗಿರುವುದು ಇಲ್ಲಿ ಬಾರಿ ಕೌತುಕ ವಾಗಿದೆ.
ಬಲ್ಲ ಮೂಲಗಳ ಪ್ರಕಾರ ಎಲ್ಲಾ ನಿರ್ದೇಶಕರಿಗೂ ಹಾಗೂ ಸಂಘ ಸಂಸ್ಥೆಯ ಅಧಿಕಾರಿಗಳಿಗೂ ಕೂಡ ಹೈಕೋರ್ಟ್ ನೋಟಿಸ್ ಜಾರಿ ಮಾಡಿರುತ್ತದೆ ಎಂದು ತಿಳಿದು ಬಂದಿರುತ್ತದೆ. ಬಿಜಾಡಿ ಮೀನುಗಾರರ ಸಹಕಾರಿ ಸಂಘದ ಎಲ್ಲಾ ಹಿಂದಿನ ಕೆಲವು ಕಡತಗಳು ಹಾಗೂ ಇಲ್ಲಿ ನಡೆದಿರುವಂತಹ ಕೆಲವು ಕೆಲಸ ಕಾರ್ಯಗಳಲ್ಲಿ ಕಾನೂನು ಬದ್ಧ ಆಗಿರದೆ ಕೆಲವು ಕಾನೂನಿನ ಉಲ್ಲಂಘನೆ ಆಗಿದ್ದಲ್ಲಿ ಅದನ್ನು ಈವಾಗಿನ ಉಳಿದ ನಿರ್ದೇಶಕರು ಯಾವ ರೀತಿ ಹೈಕೋರ್ಟಿನಲ್ಲಿ ಪ್ರಶ್ನಿಸಿ ಇಲ್ಲಿ ಕಾನೂನು ಬದ್ಧವಾದ ಅಂತಹ ಕೊರತೆಗಳನ್ನು ನೀಗಿಸಿ ಉತ್ತಮವಾದ ಸಂಸ್ಥೆಯನ್ನು ಇನ್ನಷ್ಟು ಜನ ಸೇವೆಗೆ ಅಣಿಯಾಗಿ ಸುವರೇ ಎಂದು ಎಲ್ಲರೂ ಕಾದು ನೋಡಬೇಕಾದಂತ ಸ್ಥಿತಿ ನಿರ್ಮಾಣವಾಗಿದೆ.ಎಲ್ಲರ ಚಿತ್ತ ಹೈಕೋರ್ಟಿನ ಕಡೆ ಸಾಗಿರುವುದು ಅಲ್ಲದೆ ಈಗಾಗಲೇ ಸಭೆ ಸೇರಿದ ನಿರ್ದೇಶಕರು ಮಂಜುನಾಥ ಕುಂದರ್ ಅಧ್ಯಕ್ಷರಾಗಿ ಮುಂದುವರಿಯುವಲ್ಲಿ ತಮ್ಮ ಕಡೆಯಿಂದ ಯಾವುದೇ ವಿಶ್ವಾಸ ಮತ ಇರುವುದಿಲ್ಲ ಎಂದು ತಿಳಿಸಿರುತ್ತಾರೆ.ಹಾಗಾದರೆ ಮಂಜುನಾಥ ಕುಂದರ್ ರವರದ್ದು ಎನ್ನಲಾದ ಭ್ರಷ್ಟಾಚಾರದ ಆಡಿಯೋ ಸತ್ಯ ಕ್ಕೆ ದೂರ ಆದದ್ದೇ?ಒಂದು ಕೆಲಸಕ್ಕೆ 10 ಲಕ್ಷ 7 ಜನರಿಗೆ 70 ಲಕ್ಷ?ಹೌದೇ?ಉದ್ಯೋಗ ನೇಮಕಾತಿಯ ಜಾಹೀರಾತಿನಲ್ಲಿ ಎಷ್ಟು ಸಂಬಳದ ಆಧಾರದಲ್ಲಿ ನೇಮಕಾತಿ ಎಂಬುವುದು ಯಾಕೆ ಕಾಣಿಸಲಿಲ್ಲ?ತೆಕ್ಕಟ್ಟೆ ಶಾಖೆ ಉದ್ಘಾಟನೆಯಲ್ಲಿ ದುಂದು ವೆಚ್ಚ ನಡೆಯಿತೇ?ಮಂಜುನಾಥ ಕುಂದರ್ ಅಧ್ಯಕ್ಷರಾದ ಮೇಲೆ ಸ್ಥಳೀಯರು ತಿಳಿಸುವಂತೆ ಹೆಚ್ಚಿನ ದುಂದು ವೆಚ್ಚ ನಡೆದಿತ್ತೇ? ಸಂಘಕ್ಕೆ ಕೋಟೇಶ್ವರ ಜಾಗ ಖರೀದಿಯಲ್ಲಿ ಅಕ್ರಮ ನಡೆದಿತ್ತೇ?ಅಧ್ಯಕ್ಷರ ಹುದ್ದೆಗಾಗಿ ಕಾನೂನು ಹೋರಾಟ ಸರಿ ಯಾವ ನಿರ್ದೇಶಕರ ಬೆಂಬಲ ಇಲ್ಲದೇ ಅಧಿಕಾರದ ವ್ಯಾಪ್ತಿ ಸಾಧ್ಯವುಂಟೇ?
ಎಲ್ಲದಕ್ಕೂ ಉತ್ತರ ಹೈಕೋರ್ಟಿನಲ್ಲಿ ನಡೆಯ ಬಹುದಾದ ಧೀರ್ಘಾವಧಿಯ ತನಿಖೆ?

error: No Copying!