
ದಿನಾಂಕ:09-05-2025(ಹಾಯ್ ಉಡುಪಿ ನ್ಯೂಸ್) ಅಪರೇಷನ್ ಸಿಂಧೂರ್ ಇದರ ಸಫಲತೆಯ ಪ್ರಯುಕ್ತವಾಗಿ ಆದಿಉಡುಪಿ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ 150ಕ್ಕಿಂತ ಅಧಿಕ ಜನರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಹಿಂದುಳಿದ ಮೋರ್ಚದ ಜಿಲ್ಲಾಧ್ಯಕ್ಷರಾದ ವಿಜಯ ಕೊಡವೂರು ಮತ್ತು ಎ.ಪಿ.ಎಂ.ಸಿ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಸುಭಾಷಿತ್ ಕುಮಾರ್ ಹಾಗೂ ಉಡುಪಿ ನಗರ ಬಿ.ಜೆ.ಪಿ ಮೋರ್ಚದ ಉಪಾಧ್ಯಕ್ಷರಾದ ಹಾಗೂ ಎ.ಪಿ.ಎಂ.ಸಿ ಯ ವರ್ತಕರಾದ ಸುಶಾಂತ್ ಬ್ರಹ್ಮಾವರ, ಫಯಾಝ್, ಪ್ರಭುಗೌಡ, ಅಂಬರೀಷ್, ಜಗಧೀಷ್ , ಮೋರ್ಚಾದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕಾಡುಬೆಟ್ಟು ಇವರು ಉಪಸ್ಥಿತರಿದ್ದರು.