Spread the love

ಕೊಲ್ಲೂರು:  ದಿನಾಂಕ:02-05-2025(ಹಾಯ್ ಉಡುಪಿ ನ್ಯೂಸ್) ಕಲ್ಯಾಣಿ ಗುಡ್ಡೆ ಎಂಬಲ್ಲಿನ ನಿವಾಸಿ ಗಂಗೆ ಎಂಬವರ ಮನೆಯನ್ನು ಸೇವಾ ಟ್ರಸ್ಟ್ ಒಂದರ ಪದಾಧಿಕಾರಿಗಳು ಸೇರಿ ಕೊಂಡು ಜೆಸಿಬಿ ಬಳಸಿ ನೆಲಸಮ  ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಂದೂರು, ಕೊಲ್ಲೂರು ಗ್ರಾಮದ ನಿವಾಸಿ ಗಂಗೆ (59),ಎಂಬವರು ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಎಂಬಲ್ಲಿ ಸರ್ವೆ ನಂಬ್ರ 121/* ರ 15.08.75 ಎಕ್ರೆ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗಂಗೆ ಅವರು ಜಾಗದ ಹಕ್ಕುಪತ್ರ ಕೋರಿಕೊಂಡು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ತನಿಖಾ ಹಂತದಲ್ಲಿರುತ್ತದೆ ಎನ್ನಲಾಗಿದೆ . ದಿನಾಂಕ: 17/04/2025 ರಂದು ಬೆಳಿಗ್ಗೆ  ಗಂಗೆರವರ ಪರಿಚಯದ ಶ್ರೀ ಜಗದಂಭಾ ಸೇವಾ ಟ್ರಸ್ಟ್ (ರಿ) ಕೊಲ್ಲೂರು ಇದರ ಅಧ್ಯಕ್ಷರಾದ ಪರಮೇಶ್ವರ ಅಡಿಗ ಮತ್ತು ಟ್ರಸ್ಟ್‌‌ ನ ಪದಾಧಿಕಾರಿಗಳು ಗಂಗೆರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಗಂಗೆರವರ ಮಗ ಸಂತೋಷನಲ್ಲಿ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬರನ್ನು ತೋರಿಸಿ ಇವರು ನ್ಯಾಯಾಲಯದ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ನಿಮ್ಮನ್ನು ಈ ಮನೆ ಮತ್ತು ಜಾಗದಿಂದ ಹೊರ ಹಾಕಲು ಬಂದಿದ್ದೇವೆ, ಇದಕ್ಕೆ ನೀವು ಅಡ್ಡಿ ಪಡಿಸುವಂತಿಲ್ಲ, ನಿನ್ನ ತಾಯಿ ಎಲ್ಲಿ ಎಂದು ಕೇಳಿದಾಗ ಸಂತೋಷ ಪೇಟೆಯಲ್ಲಿದ್ದ  ಗಂಗೆರವರ ಬಳಿ ಬಂದು ವಿಚಾರ ಹೇಳಿದ್ದು, ಗಂಗೆರವರು ಮನೆಗೆ ಬಂದಾಗ ಪರಮೇಶ್ವರ ಅಡಿಗ ಮತ್ತು ಟ್ರಸ್ಟ್‌‌ ನ ಪದಾಧಿಕಾರಿಗಳು, ಪರಿಚಯವಿಲ್ಲದ ಅಧಿಕಾರಿಗಳ ಹಾಗೇ ಕಾಣುವ ವ್ಯಕ್ತಿಗಳು ಹಾಗೂ ಸಮವಸ್ತ್ರದಲ್ಲಿದ್ದ ಪೊಲೀಸರು ಇದ್ದು, ಅಧಿಕಾರಿಗಳು ಮತ್ತು ಪೊಲೀಸರು ಸ್ಥಳದಿಂದ ಹೋದ ಬಳಿಕ ಪರಮೇಶ್ವರ ಅಡಿಗರವರ ಸೂಚನೆಯಂತೆ JCB ಯಂತ್ರದ ಮುಖೇನ ಗಂಗೆರವರ ಮನೆಯನ್ನು ದ್ವಂಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಗಂಗೆ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 329, 324 R/W 3(5) BNS & 3 (1) (f) (g)(p),(q),(z) SCc/ST act 2015 ರಂತೆ ಪ್ರಕರಣ ದಾಖಲಾಗಿದೆ.

error: No Copying!