Spread the love

ಕುಂದಾಪುರ: ದಿನಾಂಕ:03-05-2025 (ಹಾಯ್ ಉಡುಪಿ ನ್ಯೂಸ್) ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದು ನ್ಯಾಯಾಲಯದಿಂದ ಬಂಧನ ವಾರೆಂಟ್ ನಲ್ಲಿ ಪೊಲೀಸರಿಂದ ಬಂಧಿತನಾದ ಆರೋಪಿಯೋರ್ವ ಬಂಧನದ ವೇಳೆ ಮಾದಕವಸ್ತು ಸೇವನೆ ಮಾಡಿದ್ದ ಎಂದು ದೂರು ದಾಖಲಾಗಿದೆ.

ಆಪಾದಿತ ಇಲಾಯಿದ್‌ ಯಾನೆ ಮಂಜೂರ್‌ ಇಲಾಯಿದ್ ಎಂಬಾತನ ಮೇಲೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ 6 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದ್ದು, ಈ ಮೇಲಿನ ಪ್ರಕರಣಗಳಲ್ಲಿ ಈತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ನಂತರ  ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ  ನ್ಯಾಯಾಲಯವು ಈತನ ವಿರುದ್ದ ಜಾಮೀನು ರಹಿತ ಬಂಧನ ವಾರೆಂಟನ್ನು ಹೊರಡಿಸಿದೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ. ಬಂಧನ ವಾರೆಂಟನ್ನು ಜ್ಯಾರಿಗೊಳಿಸಲು ಠಾಣೆಯ ಸಿಬ್ಬಂದಿಯವರು ದಿನಾಂಕ 01/05/2025 ರಂದು  ಆರೋಪಿತನನ್ನು ಹೆಮ್ಮಾಡಿಯ ಸಂತೋಷ ನಗರದಲ್ಲಿ ವಶಕ್ಕೆ ಪಡೆದು  ನ್ಯಾಯಾಲಯಕ್ಕೆ ಹಾಜರುಪಡಿಸಲು  ಠಾಣೆಗೆ ಕರೆ ತಂದು ನಂಜಾನಾಯ್ಕ್‌ ಎ, ಪೊಲೀಸ್‌ ಉಪನಿರೀಕ್ಷಕರು( ಕಾ.ಸು), ಕುಂದಾಪುರ ಪೊಲೀಸ್‌ ಠಾಣೆ ಇವರ ಮುಂದೆ ಹಾಜರುಪಡಿಸಿದ್ದಾರೆ.

ಆಪಾದಿತ ಇಲಾಯಿದ್ ನನ್ನು ವಿಚಾರಣೆ ನಡೆಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ಆಪಾದಿತ ಇಲಾಯಿದ್ ನು ಮಾಧಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯರು ದೃಡಪತ್ರವನ್ನು ನೀಡಿರುತ್ತಾರೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ.

ಆಪಾದಿತನು ನ್ಯಾಯಾಲಯದಲ್ಲಿ ಪಡೆದುಕೊಂಡ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ  ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಹಾಗೂ ವಶಕ್ಕೆ ಪಡೆದ ಸಮಯ ಮಾದಕ ದ್ರವ್ಯ ಸೇವನೆ ಮಾಡಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ : 269 BNS & ಕಲಂ: 27(ಬಿ) NDPS ACT ರಂತೆ ಪ್ರಕರಣ ದಾಖಲಾಗಿದೆ.

error: No Copying!