
- ಹಿರಿಯಡ್ಕ: ಉಡುಪಿ, ಪೆರ್ಡೂರು ಗ್ರಾಮದ ನಿವಾಸಿ ಮುಸ್ತಾಫ್ (43),ಎಂಬವರು ದಿನಾಂಕ 01/05/2025 ರಂದು ರಾತ್ರಿ ಸಂಸಾರ ಸಮೇತವಾಗಿ ಬಾಗಿಲನ್ನು ಹಾಕಿಕೊಂಡು ಮನೆಯ ಒಳಗೆ ಇರುವಾಗ ಸಮಯ ಸುಮಾರು ರಾತ್ರಿ 12:15 ಗಂಟೆಗೆ ಮನೆಯ ಅಂಗಳದಲ್ಲಿ ಗಾಜು ಒಡೆದ ಶಬ್ದ ಕೇಳಿ ಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಮುಸ್ತಾಫ್ ರವರು ಮನೆಯ ಅಂಗಳದ ದೀಪವನ್ನು ಹಾಕಿ ಹೊರಗೆ ಬಂದು ನೋಡುವಾಗ ಅಂಗಳದಲ್ಲಿ ಗಾಜಿನ ಚೂರುಗಳು ಬಿದ್ದುಕೊಂಡಿರುವುದು ಕಂಡು ಬಂದಿದ್ದು ನಂತರ ಯಾರು ಎಂದು ನೋಡಿದಾಗ ಪೆರ್ಡೂರು ದೇವಸ್ಥಾನದ ಕಡೆಗೆ ಒಂದು ಮೋಟಾರು ಸೈಕಲ್‌ನಲ್ಲಿ ಎರಡು ಜನ ಮನೆಯ ಎದುರು ಬಂದು ಮೋಟಾರು ಸೈಕಲ್‌ನ್ನು ನಿಲ್ಲಿಸಿ ಕೈಯಲ್ಲಿ ಖಾಲಿ ಬಾಟಲಿಗಳನ್ನು ಹಿಡಿದು ಕೊಂಡು ಮುಸ್ತಾಫ್ ರವರ ಮನೆಯ ಅಂಗಳಕ್ಕೆ ಬಂದು ಬಾಟಲಿಗಳನ್ನು ಬಿಸಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 329(1̧), 352 BNS ರಂತೆ ಪ್ರಕರಣ ದಾಖಲಾಗಿದೆ.