
ಶಂಕರನಾರಾಯಣ:20-04-2025(ಹಾಯ್ ಉಡುಪಿ ನ್ಯೂಸ್) ಬಾಂಡ್ಯ ಹೊಳೆಯ ದಡದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಶಂಕರನಾರಾಯಣ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ದಿನಾಂಕ 17/04/2025 ರಂದು ಶಂಕರನಾರಾಯಣ ಪೊಲೀಸರಿಗೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಬಾಂಡ್ಯ ಹೊಳೆಕಡು ಎಂಬಲ್ಲಿ ಬಾಂಡ್ಯ ಹೊಳೆಯ ದಡದಲ್ಲಿ ಹಲವಾರು ಮಂದಿ ಸೇರಿ ಕೊಂಡು ಕೋಳಿಗಳನ್ನು ಹಿಂಸಾತ್ಮಕವಾಗಿ ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕ ಆಡುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದಾಗ ಅಲ್ಲಿ ಕೋಳಿ ಅಂಕ ಜುಗಾರಿ ಆಡುತ್ತಿದ್ದ ಸುಧೀರ್ ಹಾಗೂ ಸುಧಾಕರ ಎಂಬವರು ಪೊಲೀಸರಿಗೆ ಸಿಕ್ಕಿದ್ದು ಅವರನ್ನು ಬಂಧಿಸಿದ್ದಾರೆ ಸ್ಥಳದಲ್ಲಿ ಕೋಳಿ ಅಂಕ ಆಡುತ್ತಿದ್ದ 1) ಸುಧೀರ್ 2) ಸುಧಾಕರ, 3) ಅಶೋಕ್ 4) ಭಾಸ್ಕರ್, 5) ಪ್ರಸಾದ 6) ಅರುಣ್ 7) ಅರುಣ ನೀರ್ಜಡ್ಡು, 8) ಬುಟ್ಟಿ ಭಾಸ್ಕರ, 9) ಗುಂಡು ಇವರು ಉಳಿದ ಆಪಾದಿತರಾಗಿದ್ದು ಇವರೆಲ್ಲ ತಪ್ಪಿಸಿಕೊಂಡು ತಲೆಮರೆಸಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳದಲ್ಲಿ ಕೋಳಿ ಅಂಕ ಆಟದ ಬಗ್ಗೆ ಉಪಯೋಗ ಮಾಡಿದ ಕೋಳಿ ಹುಂಜ-3 (ಅಂದಾಜು ಮೌಲ್ಯ 1500). ಕೋಳಿ ಕತ್ತಿ (ಬಾಳು)-4, ಕೋಳಿಗಳನ್ನು ತುಂಬಲು ಬಳಸಿದ ಬಿಣಿ ಚೀಲ-2 ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ ನಗದು ಹಣ 1,120/- ರೂ , ಆಪಾದಿತರ ಅಂಗಜಫ್ತಿಯ ಸಮಯ ಆಪಾದಿತ ಸುಧೀರ್ ವಶದಲ್ಲಿದ್ದ SAMSUNG MOBILE-1 (ಅಂದಾಜು ಮೌಲ್ಯ 4,000/-), ಸುಧಾಕರನ ವಶದಲ್ಲಿದ್ದ VIVO MOBILE-1 (ಅಂದಾಜು ಮೌಲ್ಯ 5,000/-) ಆಗಿದ್ದು, ಸ್ವಾದೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 11,620/- ರೂ ಆಗಿದ್ದು ಇವುಗಳನ್ನು ಮುಂದಿನ ಕ್ರಮದ ಬಗ್ಗೆ ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ :112 BNS ಕಲಂ: 11(1)(a)ಪ್ರಾಣಿ ಹಿಂಸೆ ತಡೆ ಕಾಯಿದೆ ಮತ್ತು ಕಲಂ: 87 93 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.