Spread the love

ಪಡುಬಿದ್ರಿ: ದಿನಾಂಕ: 20-04-2025(ಹಾಯ್ ಉಡುಪಿ ನ್ಯೂಸ್) ಮುಕ್ಕದ ಫೈನಾನ್ಸ್ ಒಂದರ ರಿಕವರಿ ಆಫೀಸರ್ ಓರ್ವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪಲತಾ ಎಂಬವರು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಪು ತಾಲೂಕು ,ಬಡಾ ಗ್ರಾಮದ ನಿವಾಸಿ ಪುಷ್ಪ ಲತಾ (40) ಎಂಬವರು ಸುಮಾರು 6 ತಿಂಗಳ ಹಿಂದೆ ಅಂದರೆ 2024 ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಮುಕ್ಕದ ಸಾನಿಧ್ಯ ಪೈನಾನ್ಸ್‌ ನಲ್ಲಿ ರೂ 30000/- ಸಾಲ ಪಡೆದುಕೊಂಡು ಸಾಲದ ಕಂತುಗಳನ್ನು  ಪ್ರತೀ ತಿಂಗಳು  ಗೂಗಲ್‌ ಪೇ ಹಾಗೂ ಕೆಲವೊಮ್ಮೆ ನಗದಾಗಿ ಮುಖಾಂತರ ಪೈನಾನ್ಸ್‌ ನವರಿಗೆ ಪಾವತಿ ಮಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಾಲ ಮರುಪಾವತಿ ಮಾಡಲು ತಡವಾದುದಕ್ಕೆ ಇತ್ತೀಚೆಗೆ ಒಂದು ವಾರದಿಂದ  ಪೈನಾನ್ಸ್‌ ನ ರಿಕವರಿ ಆಫೀಸರ್‌ ಅಶ್ರಫ್‌ ಹಾಗೂ ಇತರರು  ಪುಷ್ಪಲತಾರವರ ಮನೆಗೆ ಪದೇ ಪದೇ ಬಂದು  ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದರೆ  ತಲೆ ಒಡೆದು ಸಾಯಿಸುತ್ತೇವೆ ಎಂಬುದಾಗಿ ಜೀವ ಬೆದರಿಕೆ ಹಾಕುತ್ತಿದ್ದು, ಅಲ್ಲದೆ ಅವಮಾನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 8, 12 ಕರ್ನಾಟಕ ಮೈಕ್ರೋ ಲೋನ್ ಅಂಡ್ ಸ್ಮಾಲ್ ಲೋನ್ ಪ್ರಿವೆನ್ಷನ್ ಆಫ್ ಕಾನ್ ಕ್ರೀವ್ ಆಕ್ಷನ್ ಆರ್ಡಿನೆನ್ಸ್ 2025 ಮತ್ತು ಕಲಂ: 329(3), 126(2), 351(2)(3) ಜೊತೆಗೆ   3(5)  BNS  ರಂತೆ ಪ್ರಕರಣ ದಾಖಲಾಗಿದೆ .

error: No Copying!