ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ತಮ್ಮ ೧೨೫ನೇ ಚಿತ್ರ ವೇದದಲ್ಲಿ ಪುನೀತ್ ರಾಜ್ ಕುಮಾರ್ ಅವರ ಕೆಲವೊಂದು ಗುಣಗಳನ್ನು ಸೇರಿಸಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ.
ಜೀಮ್ಸ್ ಸುದ್ದಿಗೋಷ್ಠಿಯಲ್ಲಿ ತನ್ನ ಸಹೋದರ ಪುನೀತ್ ರಾಜ್ ಕುಮಾರ್ ಕುರಿತು ಭಾವನೆಗಳನ್ನು ಹಂಚಿಕೊಂಡ ಸೆಂಚುರಿ ಸ್ಟಾರ್, ಅಪ್ಪು ನನ್ನ ಹೃದಯದಲ್ಲಿ ಇದ್ದಾನೆ. ವೇದ ಸಿನಿಮಾದಲ್ಲಿನ ನನ್ನ ಪಾತ್ರದಲ್ಲಿ ಅಪ್ಪುವಿನ ಮಾನವೀಯ ಗುಣಗಳನ್ನು ತರಲು ಪ್ರಯತ್ನಿಸುತ್ತಿದ್ದೇನೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
ಮಾರ್ಚ್ ೧೭ ರಂದು ತೆರೆಗೆ ಬರಲು ಸಿದ್ಧವಾಗಿರುವ ಚೇತನ್ ಕುಮಾರ್ ನರ‍್ದೇಶನದ ಜೀಮ್ಸ್ ಚಿತ್ರದಲ್ಲಿ ಪುನೀತ್ ಗಾಗಿ ಡಬ್ಬಿಂಗ್ ಕುರಿತು ಮಾತನಾಡುವಾಗ ಶಿವಣ್ಣ ಭಾವೋದ್ವೇಗಕ್ಕೊಳಗಾದರು. ಪುನೀತ್ ಹಿತವಾದ ಧ್ವನಿ ಹೊಂದಿದ್ದರು. ಅದೇ ರೀತಿ ಡಬ್ಬಿಂಗ್ ಮಾಡುವುದು ಕಷ್ಟಕರವಾಗಿತ್ತು. ಒಂದು ಮಟ್ಟಿಗೆ ನರ‍್ವಹಣೆ ಮಾಡಿರುವುದಾಗಿ ತಿಳಿಸಿದರು.
ಅಪ್ಪು ಸುತ್ತಲಿನ ಕ್ರೇಜ್ ಕುರಿತಂತೆ ಮಾತನಾಡಿದ ಶಿವಣ್ಣ, ಅಪ್ಪುವಿನ ಕ್ರೇಜ್ ಎಂದೆಂದಿಗೂ ಇರುತ್ತದೆ. ಜನ ಅದರ ಪ್ರಯೋಜನ ಪಡೆದುಕೊಳ್ಳಲಿದ್ದರೆ, ಒಳ್ಳೆಯದು. ಅನೇಕ ಜನರಿಗೆ ಅಪ್ಪು ಸ್ಪರ‍್ತಿಯಾಗಿದ್ದಾರೆ. ಅಪ್ಪುವನ್ನು ಪ್ರತಿಮೆ ರೂಪದಲ್ಲಿ ನೋಡಲು ತುಂಬಾ ನೋವಾಗುತ್ತದೆ. ನಾನು ನೋಡುವಂತೆ ಪ್ರತಿಮೆ ಇಡದಂತೆ, ಅವುಗಳನ್ನು ಉದ್ಘಾಟನೆಗೆ ಕರೆಯದಂತೆ ಅಭಿಮಾನಿಗಳಿಗೆ ಹೇಳಿದ್ದೇನೆ. ಅದು ಹೃದಯಕ್ಕೆ ತುಂಬಾ ನೋವುಂಟು ಮಾಡುತ್ತದೆ ಎಂದರು.