ಉಕ್ರೇನ್, ಮಾ.೮: ರಷ್ಯಾ ಮತ್ತು ಉಕ್ರೇನ್ ನಡುವಿನ ಮಿಲಿಟರಿ ಸಂರ‍್ಷ ೧೩ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಅಧ್ಯಕ್ಷ ವೋಡ್ಲಿಮಿರ್ ಝೆಲೆನ್ಸ್ಕಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ನಾನು ಕ್ಯಿವ್ ನಗರದಲ್ಲಿಯೇ ಇದ್ದೇನೆ.ಎಲ್ಲೂ ಅಡಗಿಕೊಳ್ಳುವುದಿಲ್ಲ, ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿ ಯುದ್ಧ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ತಡರಾತ್ರಿ ತಮ್ಮ ಫೆಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಅವರು, ತಮ್ಮ ಕಚೇರಿಯಿಂದ ತಾವಿರುವ ನಗರವನ್ನು ತೋರಿಸಿದ್ದಾರೆ. ಈ ವೇಳೆ ನಾನು ಕ್ಯಿವ್‍ನ ಬಂಕೋವಾ ಸ್ಟ್ರೀಟ್‍ನಲ್ಲಿ ಇದ್ದೇನೆ. ಎಲ್ಲೂ ಅವಿತುಕೊಂಡಿಲ್ಲ. ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿ ಈ ರೀತಿಯ ಇದೆ. ಆದಷ್ಟು ಬೇಗ ಈ ದೇಶಭಕ್ತಿ ಯುದ್ದವನ್ನು ಗೆಲ್ಲುತ್ತದೆ ಎಂದಿದ್ದಾರೆ.
ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ಬೆಲರಾಸ್ ಪೋಲೆಂಡ್ ಗಡಿಯಲ್ಲಿ ನಡೆಸಿದ ಮೂರನೇ ಸುತ್ತಿನ ಶಾಂತಿ ಮಾತುಕತೆ ಕೂಡ ವಿಫಲವಾದ ಬೆನ್ನಲ್ಲೆ ಝೆಲೆನ್ಸ್ಕಿ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.