ಸಂಕಷ್ಟ ಸಮಯದಲ್ಲಿ ಹೂಡಿಕೆದಾರರ ನೆಚ್ಚಿನ ಆಸರೆ ಎನಿಸಿರುವ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಹತ್ತು ಗ್ರಾಂ ಚಿನ್ನದ ಬೆಲೆ ಇದೀಗ ₹ ೫೩ ಸಾವಿರ ದಾಟಿದೆ.
ಮುಂಬೈ: ಉಕ್ರೇನ್ ಮತ್ತು ರಷ್ಯಾ ಸಂರ‍್ಷ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಷೇರುಪೇಟೆಗಳು ಸತತ ಕುಸಿತ ದಾಖಲಿಸುತ್ತಿವೆ.
ಮುಂಬೈ ಪೇಟೆಯ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಲ್ಲಿ ೫೦೦ ಅಂಶಗಳ ಕುಸಿತ ಕಂಡಿದೆ. ಲೋಹ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಆಟೊ, ತೈಲಸಂಸ್ಕರಣಾ ಕಂಪನಿಗಳ ಷೇರುಗಳ ಬೆಲೆಗಳೂ ಕುಸಿದಿವೆ. ಇಂಧನ, ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳ ಮೌಲ್ಯ ವೃದ್ಧಿಯಾಗಿದೆ. ಸಂಕಷ್ಟ ಸಮಯದಲ್ಲಿ ಹೂಡಿಕೆದಾರರ ನೆಚ್ಚಿನ ಆಸರೆ ಎನಿಸಿರುವ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಹತ್ತು ಗ್ರಾಂ ಚಿನ್ನದ ಬೆಲೆ ಇದೀಗ ₹ ೫೩ ಸಾವಿರ ದಾಟಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್ಗೆ ೨೦೦೦ ಅಮೆರಿಕನ್ ಡಾಲರ್ ದಾಟಿದೆ. ಕೊವಿಡ್ ಸಂಕಷ್ಟದಿಂದ ವಿಶ್ವದ ಹಲವು ದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ರ‍್ಥಿಕ ಹಿಂಜರಿತದ ಭೀತಿಯಲ್ಲಿದ್ದಾಗಲೇ ಶುರುವಾದ ರಷ್ಯಾ-ಉಕ್ರೇನ್ ಸಂರ‍್ಷವು ಈಗಾಗಲೇ ವಿಶ್ವದ ಹಲವು ದೇಶಗಳನ್ನು ನಲುಗಿಸಿರುವ ಹಣದುಬ್ಬರವನ್ನು ಇನ್ನಷ್ಟು ಏರಿಸುವ ಸಾಧ್ಯತೆ ಕಂಡು ಬರುತ್ತಿದೆ. ಹೀಗಾಗಿ ಜನರು ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.
ಪ್ರತಿಬಾರಿ ಷೇರುಪೇಟೆಯಲ್ಲಿ ಹೊಯ್ದಾಟ ಹೆಚ್ಚಾಗಿದ್ದಾಗ, ಬಡ್ಡಿದರ ಇಳಿಕೆ ಕಂಡಿದ್ದಾಗ ಚಿನ್ನದ ಮೌಲ್ಯ ಹೆಚ್ಚಾಗುವುದು ಸಹಜ ವಿದ್ಯಮಾನ ಎನಿಸಿಕೊಳ್ಳುತ್ತದೆ. ಹಣದುಬ್ಬರ ಭೀತಿಯ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ದೇಶೀಯವಾಗಿ ರ‍್ಥಿಕ ಪರಿಸ್ಥಿತಿ ಕಳೆದ ಮೂರು ರ‍್ಷಗಳ ಕಳಾಹೀನ ಸ್ಥಿತಿಯಿಂದ ಹೊರಬರುತ್ತಿದೆ. ಸಂಗ್ರಹವಾಗಿದ್ದ ಹಣವನ್ನು ಜನರು ಹೊರತೆಗೆಯಲು ಆರಂಭಿಸಿದ್ದಾರೆ. ಆಭರಣ ಚಿನ್ನದ ಬೇಡಿಕೆ ಕುದುರುತ್ತಿರುವುದು ಸಹ ಚಿನ್ನದ ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ ಎನಿಸಿದೆ.
ಷೇರುಪೇಟೆ ಹೊಯ್ದಾಟ
ವಿಶ್ವದ ವಿವಿಧೆಡೆ ಷೇರುಪೇಟೆಗಳು ಏರಿಳಿತ ಕಾಣುತ್ತಿವೆ. ಅಮೆರಿಕದ ನ್ಯೂಯರ‍್ಕ್ ಸ್ಟಾಕ್ ಎಕ್ಸ್ಚೇಂಜ್ (ನಾಸ್ಡಾಕ್) ಈಚಿನ ದಿನಗಳಲ್ಲಿ ಶೇ ೨೦ರಷ್ಟು ಕುಸಿದಿದೆ. ಭಾರತದ ಷೇರುಪೇಟೆಯ ಸಂವೇದಿಕೆ ಸೂಚ್ಯಂಕ ನಿಫ್ಟಿ ಶೇ ೧೫ರಷ್ಟು ಕುಸಿದಿದೆ. ಕಮಾಡಿಟಿ ಮಾರುಕಟ್ಟೆಯಲ್ಲಿ ವಹಿವಾಟಾಗುವ ಸರಕುಗಳ ಮೌಲ್ಯ ಹಣದುಬ್ಬರದ ಭೀತಿಯಿಂದ ಭಾರೀ ಏರಿಕೆ ಕಂಡಿವೆ.
‘ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ಎಕ್ಸಿಟ್ ಪೋಲ್ಗಳ ಭವಿಷ್ಯ ಮತ್ತು ಅಮೆರಿಕದ ಬಾಂಡ್ ಯೀಲ್ಡ್ ಕಡಿಮೆ ಆಗಬಹುದು ಎಂಬ ಮುನ್ಸೂಚನೆಯಿಂದ ಭಾರತದ ಷೇರುಪೇಟೆ ಮಂಗಳವಾಗ (ಮರ‍್ಚ್ ೮) ತುಸು ಚೇತರಿಕೆ ಕಂಡಿದೆ. ಈ ಹಂತದಲ್ಲಿ ಐಟಿ, ಎರ‍್ಜಿ, ಮೆಟಲ್ಸ್ ಮತ್ತು ಫರ‍್ಮಾ ವಲಯದ ಹೂಡಿಕೆ ಬೇಗ ಕರಗದು. ದರ‍್ಘಾವಧಿ ಹೂಡಿಕೆದಾರರಿಗೆ ಬ್ಯಾಂಕಿಂಗ್ ವಲಯ ಪ್ರವೇಶಿಸಲು ಇದು ಸೂಕ್ತ ಸಮಯ’ ಎಂದು ಅಭಿಪ್ರಾಯಪಟ್ಟಿದ್ದಾರೆ ಜಿಯೊಜಿತ್ ಫೈನಾನ್ಷಿಯಲ್ ರ್ವೀಸಸ್ನ ಮುಖ್ಯ ಕರ‍್ಯತಂತ್ರ ಅಧಿಕಾರಿ ವಿ.ಕೆ.ವಿಜಯಕುಮಾರ್.