Spread the love

ಗಂಗೊಳ್ಳಿ: ದಿನಾಂಕ: 15-04-2025(ಹಾಯ್ ಉಡುಪಿ ನ್ಯೂಸ್) ಆಲೂರು ಗ್ರಾಮದ ದೂಮನಪಾಲುವಿನಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಈರ್ವರ ಮೇಲೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಗಂಗಾಧರ ಅವರು ಆಲೂರು ಗ್ರಾಮದ ಬೀಟ್‌ ಸಿಬ್ಬಂದಿಯಾಗಿದ್ದು ದಿನಾಂಕ 14/03/2025 ರಂದು ಆಲೂರು ಗ್ರಾಮದ ದೂಮನಪಾಲುವಿನಲ್ಲಿ ಯಾವುದೇ ಅನುಮತಿ ಇಲ್ಲದೇ ಕೆಂಪು ಕಲ್ಲು ಕೋರೆಯಲ್ಲಿ ಕಲ್ಲುಗಳನ್ನು ತೆಗೆಯುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ಹೋಗಿ ಗಂಗಾಧರ ಅವರು ನೋಡಿದಾಗ ಮೂರು ಜನರು ಕೆಂಪು ಕಲ್ಲು ಕೋರೆಯಲ್ಲಿ ಕಲ್ಲುಗಳನ್ನು ತೆಗೆಯುತ್ತಿದ್ದು . ಅವರಲ್ಲಿ ಕಲ್ಲು ತೆಗೆಯಲು ಅನುಮತಿ ಇದೆಯೇ ಎಂದು ಕೇಳಿದಾಗ ಯಾವುದೇ ಅನುಮತಿ ಇಲ್ಲವಾಗಿ ತಿಳಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಲ್ಲು ಕೋರೆ ನಡೆಸುತ್ತಿದ್ದವರ ಬಗ್ಗೆ ವಿಚಾರಿಸಿದಾಗ ಆಲೂರಿನ ಪ್ರಶಾಂತ್‌ ಎಂಬವರು ಸುಬ್ರಹ್ಮಣ್ಯ ಎಂಬವರ ಜಾಗದಲ್ಲಿ ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ. ಕೆಂಪು ಕಲ್ಲು ಕೋರೆಯಲ್ಲಿ ಸುಮಾರು 120 ಕೆಂಪು ಕಲ್ಲುಗಳು ಇರುವುದು ಕಂಡುಬಂದಿರುತ್ತದೆ. ಈ ಕಲ್ಲು ಕೋರೆಯಲ್ಲಿ ಕಲ್ಲುಗಳನ್ನು ಕಟ್ಟಿಂಗ್‌ ಮಾಡುವ ಮಿಷನ್‌, ಹಾರೆ ಇರುವುದು ಕಂಡು ಬಂದಿರುತ್ತದೆ. ಆ ಜಾಗದಲ್ಲಿ ಪ್ರಶಾಂತ್‌ , ಸುಬ್ರಹ್ಮಣ್ಯ‌ ಮತ್ತು ಅವರ ಕೆಲಸಗಾರರು ಒಟ್ಟುಗೂಡಿ  ಅಪರಾಧ ಎಸಗುವ ಇರಾದೆಯಿಂದಲೇ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲುಗಳನ್ನು ಕಳವು ಮಾಡಿ ಅವುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲು ತಯಾರಿ ಮಾಡಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ:303(2) ,112 BNS ಮತ್ತು ಕಲಂ: 4, 4(1A), 21 MMRD (MINES AND MINERALS REGULATION OF DEVELOPMENT)ACT 1957 ರಂತೆ ಪ್ರಕರಣ ದಾಖಲಾಗಿದೆ.

error: No Copying!