Spread the love

ಮಲ್ಪೆ: ದಿನಾಂಕ:15-04-2025(ಹಾಯ್ ಉಡುಪಿ ನ್ಯೂಸ್) ಪರಿಸರದ ಮಸೀದಿ ಬಳಿಯ ಶೌಚಾಲಯದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನವಜಾತ ಶಿಶುವಿನ ಮ್ರತ ದೇಹ ಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಉಡುಪಿ, ತೆಂಕನಿಡಿಯೂರು ಗ್ರಾಮದ ನಿವಾಸಿ  ಸುಹೇಲ್ (27) ಎಂಬವರು ಮಲ್ಪೆ ಜಂಕ್ಷನ್‌ ಬಳಿ ಇರುವ ಜಾಮೀಯಾ ಮಸೀದಿಯ ಮೇನೆಜರ್‌ ಆಗಿದ್ದು, ಮಸೀದಿಯ ಬಳಿ ಮಸೀದಿಗೆ ಸಂಬಂಧಿಸಿದ 2 ಅಂತಸ್ತಿನ ಕಟ್ಟಡವಿದ್ದು, ಕಟ್ಟಡದಲ್ಲಿರುವ ಕೆಲಸಗಾರರಿಗಾಗಿ ಕಟ್ಟಡದ ಬದಿಯಲ್ಲಿ ಒಂದು ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 14/04/2025 ರಂದು ಸುಹೇಲ್  ಅವರು ಶೌಚಾಲಯವನ್ನು ಉಪಯೋಗಿಸಲು ಶೌಚಾಲಯದ ಒಳಗೆ ಹೋದಾಗ ಒಂದು ನವಜಾತ ಶಿಶುವು ಬಿದ್ದುಕೊಂಡಿದ್ದು, ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದಿದ್ದು, ನವಜಾತ ಶಿಶು ಜನನಕ್ಕೆ ಮುಂಚೆ ಅಥವಾ ಆ ತರುವಾಯ ಅಥವಾ ಜನನದ ಕಾಲದಲ್ಲಿ ಮರಣ ಹೊಂದಿದ್ದು, ಯಾರೋ ಅಪರಿಚಿತರು ಆ ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೇವಾರಿ ಮಾಡಿ, ಮಗುವಿನ ಜನನವನ್ನು ಮರೆಮಾಚಿಡಲು ಯತ್ನ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ   ಕಲಂ: 94 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!