Spread the love

ಮಲ್ಪೆ: ದಿನಾಂಕ:27-03-2025(ಹಾಯ್ ಉಡುಪಿ ನ್ಯೂಸ್) ಕೊಡವೂರು ಗ್ರಾಮದ ನಿವಾಸಿಯೋರ್ವರಿಗೆ ಪರಿಚಯದ ವ್ಯಕ್ತಿಯೇ ಜಾಗ ರಿಜಿಸ್ಟರ್ ಮಾಡಿಸಿ ಕೊಡುವುದಾಗಿ ನಂಬಿಸಿ ಸುಮಾರು ನಾಲ್ಕು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೊಡವೂರು ಗ್ರಾಮದ ನಿವಾಸಿ ಸುರೇಶ್ ಕಲ್ಮಾಡಿ ಅವರ   ಪರಿಚಯದವರಾದ ಪ್ರದೀಪ ಕಿದಿಯೂರು ಎಂಬುವವನು ಸುರೇಶ್ ಕಲ್ಮಾಡಿ ರವರಿಗೆ ಮತ್ತು ಅವರ ಹೆಂಡತಿಗೆ ಕಲ್ಮಾಡಿ ಬಂಕೇರಕಟ್ಟ ಎಂಬಲ್ಲಿ 4 ಸೆಂಟ್ಸ್ ಜಾಗವನ್ನುಅವರ ಹೆಸರಿಗೆ ಮಾಡಿಕೊಡುವುದಾಗಿ ಹೇಳಿ ಮತ್ತು ಜಾಗದಲ್ಲಿ ಮೆಸ್ಕಾಂ ಕಂಬವನ್ನು ಹಾಕಿಕೊಡುತ್ತೇನೆಂದು 225000/- ರೂ ನಗದು ಹಣವನ್ನು ಸುರೇಶ್ ಕಲ್ಮಾಡಿ ರವರ ಕೈಯಿಂದ ಪಡೆದುಕೊಂಡಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಆಗಸ್ಟ್ 2024 ರಲ್ಲಿ ಪುನಃ ಜಾಗದ ರಿಜಿಸ್ಟ್ರೇಶನ್ ಮಾಡಿಸಲು ಸ್ವಲ್ಪ ಹಣದ ಅವಶ್ಯಕತೆಯಿದೆ ಎಂದುಹೇಳಿ ಸುರೇಶ್ ಕಲ್ಮಾಡಿ ರವರ ಹೆಂಡತಿಯಬಳಿ 6 ಪವನ್ ಚಿನ್ನವನ್ನು ಪಡೆದು ಯಾವದೋ ಬ್ಯಾಂಕಿನಲ್ಲಿ ಅಡವಿಟ್ಟು ಸುಮಾರು 135000/- ಹಣವನ್ನುಪಡೆದುಕೊಂಡಿರುತ್ತಾನೆ ಎಂದು ದೂರಿದ್ದಾರೆ.

ಆರೋಪಿ ಪ್ರದೀಪ ನು ಸುರೇಶ್ ಕಲ್ಮಾಡಿ ರವರಿಂದ ಹಣ ಮತ್ತು ಚಿನ್ನವನ್ನುಪಡೆದು 4 ಸೆಂಟ್ಸ್ ಜಾಗವನ್ನು ರಿಜಿಸ್ಟ್ರೆಶನ್ ಮಾಡಿಕೊಡದೆ ಹಣವನ್ನೂ ವಾಪಾಸ್ಸು ಕೊಡದೆ ಚಿನ್ನವನ್ನು ಮಾರಾಟ ಮಾಡಿ ನಂಬಿಕೆದ್ರೋಹ ಹಾಗೂ ವಂಚನೆ ಮಾಡಿದ್ದಾನೆ ಎಂದು ಸುರೇಶ್ ಕಲ್ಮಾಡಿ  ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 316(2),318(4) BNS 2023  ರಂತೆ ಪ್ರಕರಣ ದಾಖಲಾಗಿದೆ.

error: No Copying!