
ಉಡುಪಿ: ದಿನಾಂಕ 27-03-2025(ಹಾಯ್ ಉಡುಪಿ ನ್ಯೂಸ್)
ಬಿಜೆಪಿಯವರು ಮೋದಿ ಹೆಸರಲ್ಲಿ ಮುಸಲ್ಮಾನರಿಗೆ ಏನಾದರೂ ಕೊಡುಗೆ ನೀಡಿದರೆ ಅದು ಸಹಾಯ, ಆದರೆ ಕಾಂಗ್ರೆಸ್ ಪಕ್ಷದವರು ಮುಸಲ್ಮಾನರಿಗೆ ಸಹಾಯ ಮಾಡಿದರೆ ಅದು ಹಿಂದೂ ವಿರೋಧಿಗಳು , ಇದು ಬಿಜೆಪಿಯ ನಾಯಕರುಗಳು ಅಧಿಕಾರಕ್ಕಾಗಿ ಮಾಡುತ್ತಿರುವ ಒಂದು ಕುತಂತ್ರ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ .
ದೇಶದಲ್ಲಿ ಈ ರಂಜಾನ್ ಹಬ್ಬದ ಶುಭ ಸಂದರ್ಭದಲ್ಲಿ ಬಿಜೆಪಿಯವರು ನಮ್ಮ ದೇಶದ ಲಕ್ಷಾಂತರ ಮುಸಲ್ಮಾನರಿಗೆ ಕಿಟ್ ವಿತರಣೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದು ಸ್ವಾಗತ .ಇದು ತಮ್ಮ ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ಪಡೆದು ಹಣ ಗಳಿಸಲಿಕ್ಕಾಗಿ ಎಂಬುದು ಇವರ ಈ ನಡೆಯಿಂದ ಸಾಬೀತಾಗಿದೆ.
ಕಾಂಗ್ರೆಸ್ ಪಕ್ಷವು ಮುಸಲ್ಮಾನರಿಗೆ ಏನಾದರೂ ಕೊಡುಗೆಯನ್ನು ನೀಡಿದರೆ ಅದು ಹಿಂದೂ ವಿರೋಧಿ ಎಂಬ ಅಪಪ್ರಚಾರವನ್ನು ಮಾಡಿ ದೇಶದಾದ್ಯಂತ ಪ್ರತಿಭಟನೆಯನ್ನು ಮಾಡುವ ಈ ಕೆಟ್ಟ ಬಿಜೆಪಿ ನಾಯಕರುಗಳಿಗೆ ನಮ್ಮ ದೇಶದ ಜನಸಾಮಾನ್ಯರು ಈ ಬಿಜೆಪಿಯವರ ದ್ವಿಮುಖ ನೀತಿಯನ್ನು ಸಂಪೂರ್ಣವಾಗಿ ವಿರೋಧಿಸಬೇಕಾಗಿದೆ. ಕೇವಲ ತಮ್ಮ ಅಧಿಕಾರದ ಆಸೆಗಾಗಿ ಈ ಬಿಜೆಪಿ ನಾಯಕರುಗಳು ನಮ್ಮ ದೇಶದಾದ್ಯಂತ ಕೋಮು ಗಲಭೆಯನ್ನು ಸೃಷ್ಟಿಸಿ ಅಧಿಕಾರವನ್ನು ಪಡೆದುಕೊಂಡಿರುತ್ತಾರೆ. ನಮ್ಮ ರಾಜ್ಯದಲ್ಲಿ ಮುಸ್ಲಿಮರಿಗೆ ನಾಲ್ಕು4% ಶೇಖಡ ಗುತ್ತಿಗೆ ಕಾಮಗಾರಿ ಮಾಡಲು ಅವಕಾಶ ನೀಡಿದ್ದಕ್ಕಾಗಿ ರಾಜ್ಯದ ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷವು ಹಿಂದು ವಿರೋಧಿ ಎಂಬಂತೆ ಬಿಂಬಿಸಿರುತ್ತಾರೆ .
ಆದರೆ ಕಾಂಗ್ರೆಸ್ ಪಕ್ಷ ಯಾವತ್ತು ಜಾತಿ ಹಾಗೂ ಕೋಮು ರಾಜಕೀಯವನ್ನು ಮಾಡದೆ ಎಲ್ಲರಿಗೂ ಸಮ ಪಾಲು .ಸಮ ಬಾಳು . ಎಂಬ ತತ್ವದ ಅಡಿಯಲ್ಲಿ ನಮ್ಮ ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿದ್ದು ರಾಜ್ಯದ ಜನಸಾಮಾನ್ಯರ ಸಂಪೂರ್ಣ ಬೆಂಬಲ ಕಾಂಗ್ರೆಸ್ ಪಕ್ಷದ ಮೇಲೆ ಇದ್ದು ಮುಂದಿನ ದಿನಗಳಲ್ಲಿ ತಮಗೆ ಯಾವುದೇ ಅವಕಾಶಗಳು ಸಿಗಲಿಕ್ಕೆ ಇಲ್ಲ ಎಂದು ಅರಿತ ಈ ಬಿಜೆಪಿ ನಾಯಕರುಗಳು ಅನಗತ್ಯವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಇವರಿಗೆ ತಕ್ಕ ಪಾಠವನ್ನು ನಮ್ಮ ರಾಜ್ಯದ ಎಲ್ಲಾ ಮತದಾರರು ಜಾತಿಭೇದವನ್ನು ಮರೆತು ಒಗ್ಗಟ್ಟಾಗಿ ಕಲಿಸಬೇಕಾಗಿದೆ. ಮಾತ್ರವಲ್ಲದೆ ನಾವೆಲ್ಲರೂ ಭಾರತೀಯರು ಎಂಬುದನ್ನು ಈ ಬಿಜೆಪಿಯ ನಾಯಕರಿಗೆ ತೋರಿಸಿಕೊಡಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.