
ಬ್ರಹ್ಮಾವರ: ದಿನಾಂಕ:27-03-2025(ಹಾಯ್ ಉಡುಪಿ ನ್ಯೂಸ್) ಮುದ್ದು ಮನೆ ನಿವಾಸಿ ಯೋರ್ವರು ರಾತ್ರಿ ವೇಳೆ ಯಕ್ಷಗಾನ ಕಾರ್ಯಕ್ರಮಕ್ಕೆ ಹೋಗಿದ್ದ ಸಮಯ ಮನೆಯಲ್ಲಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಶಿರೂರು ಗ್ರಾಮ ಮುದ್ದು ಮನೆ ನಿವಾಸಿ ರಾಜೀವಿ (70) ಎಂಬವರು ದಿನಾಂಕ 26.03.2025 ರಂದು ರಾತ್ರಿ ಮನೆಗೆ ಬೀಗ ಹಾಕಿ ಮನೆಯ ಸಮೀಪ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಕ್ಕೆ ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ರಾಜೀವಿ ರವರ ಮನೆಯ ಹಿಂಬದಿ ಬಾಗಿಲನ್ನು ಮುರಿದು ಮನೆಯ ಒಳಗೆ ಬಂದು ಗೊದ್ರೇಜ್ ಕಪಾಟಿನಲ್ಲಿ ಒಂದು ಡಬ್ಬದಲ್ಲಿ ಕೂಡಿಟ್ಟಿದ್ದ ಸುಮಾರು ರೂ. 40,000/- ಮೌಲ್ಯದ ನಾಣ್ಯಗಳು ಹಾಗೂ ನೋಟುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ U/S 305(a), 331(2) BNS ರಂತೆ ಪ್ರಕರಣ ದಾಖಲಾಗಿದೆ.