
- ಕೊಲ್ಲೂರು: ದಿನಾಂಕ :27/03/2025 (ಹಾಯ್ ಉಡುಪಿ ನ್ಯೂಸ್) ಕೊಲ್ಲೂರು ಮುಖ್ಯ ರಸ್ತೆಯಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಇಬ್ಬರು ಯುವಕರನ್ನು ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ವಿನಯ್ ಎಂ ಕೊರ್ಲಹಳ್ಳಿ ಅವರು ಬಂಧಿಸಿದ್ದಾರೆ .
- ಕೊಲ್ಲೂರು ಪೊಲೀಸ್ ಠಾಣೆ ಪಿಎಸ್ಐ ಯವರು ದಿನಾಂಕ : 26-03-2025 ರಂದು ಚಾಲಕ ಚಂದ್ರ , ಸಿಬ್ಬಂದಿಯವರಾದ ನಾಗೇಂದ್ರ, ರಾಮ ಹಾಗೂ ಸಂತೋಷ ಅವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಕೊಲ್ಲೂರು ಗ್ರಾಮದ, ಕೊಲ್ಲೂರು ಮಾಸ್ತಿಕಟ್ಟೆ ಬಳಿಯ ಎನ್. ಹೆಚ್ 766 ಸಿ ರಸ್ತೆಯಲ್ಲಿ ಆಪಾದಿತ ಶರಣ್, ಹಾಗೂ ಸತೀಶ್ ಎಂಬಿಬ್ಬರು ಅನುಮಾನಾಸ್ಪದವಾಗಿ ಕುಳಿತುಕೊಂಡಿದ್ದರು ಎನ್ನಲಾಗಿದೆ.
- ಪೊಲೀಸರು ವಿಚಾರಿಸಿದಾಗ ಇಬ್ಬರೂ ತೊದಲುತ್ತ ಮಾತನಾಡಿದ್ದು, ಮಾದಕ ವಸ್ತು ಸೇವನೆ ಮಾಡಿರುವಂತೆ ಅನುಮಾನ ಬಂದ ಮೇರೆಗೆ ಇಬ್ಬರನ್ನೂ ಬಂಧಿಸಿ ವಶಕ್ಕೆ ಪಡೆದು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು, ಇಬ್ಬರನ್ನೂ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ವೈದ್ಯರು ಪರೀಕ್ಷಿಸಿ ಆಪಾದಿತರು ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿದ್ದಾರೆ ಎನ್ನಲಾಗಿದೆ.
- ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 27(ಬಿ) NDPS ACT ರಂತೆ ಪ್ರಕರಣ ದಾಖಲಾಗಿದೆ.