Spread the love

ಉಡುಪಿ: ದಿನಾಂಕ: 26-03-2025(ಹಾಯ್ ಉಡುಪಿ ನ್ಯೂಸ್)   ನ್ಯಾಯಾಲಯದಲ್ಲಿ ಕಕ್ಷಿದಾರನಿಂದ ಲಂಚ ಸ್ವೀಕರಿಸುತ್ತಿದ್ದ ಎಪಿಪಿ ಯೋರ್ವರನ್ನು ಉಡುಪಿ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣವೊಂದರಲ್ಲಿ ಸೀಜ್ ಆಗಿರುವ ಸೈಯದ್ ನಿಜಾಮುದ್ದೀನ್ ಎಂಬವರ ವಾಹನ ರಿಲೀಸ್ ಮಾಡಿಸಲು ನ್ಯಾಯಾಲಯಕೆ ಅಕ್ಕ್ಷೇಪಣೆ ಸಲ್ಲಿಸಲು 2000 ಲಂಚಕ್ಕೆ ಬೇಡಿಕೆ ಇಟ್ಟ ಸಹಾಯಕ ಸರಕಾರಿ ಅಭಿಯೋಜಕ ಅಧಿಕಾರಿ ಗಣಪತಿ ವಸಂತ ನಾಯಕ್, ಎಂಬವರನ್ನು ರೆಡ್ ಹ್ಯಾಂಡ್ ಆಗಿ ಉಡುಪಿ ಲೋಕಾಯುಕ್ತ ಪೊಲೀಸರು ಇಂದು ಬಂಧಿಸಿದ್ದಾರೆ .

ಲೋಕಾಯುಕ್ತ ಅಧೀಕ್ಷಕರಾದ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಮಂಜುನಾಥ್, ಶಂಕರ್ ಪ್ರಭಾರ ಪೊಲೀಸ್ ಉಪಾಧ್ಯಕ್ಷರು. ಇನ್ಸ್ ಪೆಕ್ಟರ್ ರಾಜೇಂದ್ರ ನಾಯಕ್ ಎಂ ಏನ್.ಹಾಗೂ ಸಿಬ್ಬಂದಿಗಳು ನಾಗೇಶ್ ಉಡುಪ, ನಾಗರಾಜ್, ರೋಹಿತ್, ಸತೀಶ್, ಪುಷ್ಪಲತಾ, ಮಲ್ಲಿಕಾ, ಅದ್ಭುಲ್ ಜಲಾಲ್, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ರಮೇಶ್, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ,ಸುಧೀರ್ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

error: No Copying!