Spread the love

ಮಲ್ಪೆ: ದಿನಾಂಕ: 26/03/2025 (ಹಾಯ್ ಉಡುಪಿ ನ್ಯೂಸ್) ಬಂದರಿನಲ್ಲಿ ಮೀನು ಕದ್ದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದ ಪ್ರಕರಣದ ವೀಡಿಯೋ ವೈರಲ್ ಆಗಿ ಅದರಿಂದಾಗಿ ಹಲ್ಲೆ ನಡೆಸಿದವರ ಬಂಧನ, ಮೀನುಗಾರರ ಪ್ರತಿಭಟನೆ ನಡೆದು ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದವರ ಮೇಲೂ ಪ್ರಕರಣ ದಾಖಲಾಗಿದೆ.ಇದೀಗ ದ್ವೇಷ ಭರಿತ ಆಡಿಯೋ ವೈರಲ್ ಹರಿಯ ಬಿಟ್ಟಿದ್ದಾರೆ ಎಂದು ಮತ್ತೊಂದು ಪ್ರಕರಣ ದಾಖಲಾಗಿದೆ.

ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಈ ವರೆಗೆ 5 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಈ ವಿಚಾರದಲ್ಲಿ ಮೀನುಗಾರ ಸಂಘಟನೆಗಳು ಪ್ರತಿಭಟನಾ ಸಭೆಯನ್ನು ದಿನಾಂಕ :22/03/2025 ರಂದು ಮಲ್ಪೆಯ ಬಂದರು ಪ್ರದೇಶದಲ್ಲಿ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಮೋದ್‌ ಮಧ್ವರಾಜ್‌ ಹಾಗೂ ಮಂಜು ಕೊಳ ಎಂಬಿಬ್ಬರು ಈ ಹಿಂದೆ ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಗಲಭೆ ಮಾಡಿದ ರೀತಿಯಲ್ಲಿ ಇನ್ನೊಮ್ಮೆ ಮಾಡಬೇಕಾಗುತ್ತದೆ ಎಂದು ಉಲ್ಲೇಖಿಸಿ ಭಾಷಣ ಮಾಡಿರುತ್ತಾರೆ. ಈ ಬಗ್ಗೆ ಈಗಾಗಲೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ 02 ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ ಎನ್ನಲಾಗಿದೆ .

ಹಾಗಿದ್ದರೂ ಈ ದಿವಸ ಯಾರೋ ಅಪರಿಚಿತ ವ್ಯಕ್ತಿಯು ವಾಟ್ಸಾಪ್‌ ನಲ್ಲಿ ವಾಯ್ಸ್‌ ನೋಟ್‌ ನ್ನು ಬಿಟ್ಟಿದ್ದು ಎಲ್ಲರೂ ಒಟ್ಟಾಗಿ ಒಂದೊಂದು ಮನೆಯಲ್ಲಿ ಎಷ್ಟು ಜನ ಇದ್ದಾರೆ ಅವರೆಲ್ಲರೂ ರೋಡಿಗೆ ಇಳಿದು ಸ್ಟ್ರೈಕ್‌ ಮಾಡಬೇಕು ಹಾಗೆ ಮಾಡಿದರೆ ಮಾತ್ರ SP ಗೆ ಹಾಗೆ ಅವರ ಮೇಲೆ ಇದ್ದವರಿಗೂ ನಮ್ಮ ಶಕ್ತಿ ಎಷ್ಟು ಇದೆ ಎಂದು ಗೊತ್ತಾಗುತ್ತೆ” ಎಂದು  ವಾಯ್ಸ್ ಆಡಿಯೋ ಹರಿಯಬಿಟ್ಟಿದ್ದಾನೆ.

ಈ ಅಪರಿಚಿತ ವ್ಯಕ್ತಿಯು ಆಡಿಯೋ ಕ್ಲಿಪ್‌ ನಲ್ಲಿ ತಿಳಿಸುವ ಮೂಲಕ ಪುನಃ ಸಾರ್ವಜನಿಕರಿಂದ ಇಂಥಹ ಅಪರಾಧ ಮಾಡಿಸಲು ದುಷ್ಪ್ರೇರಣೆ ಮಾಡುತ್ತಾ, ದ್ವೇಷ ಭಾವನೆಯಿಂದ, ಇಷ್ಟಪೂರ್ವಕವಾಗಿ ದೊಂಬಿಯ ಅಪರಾಧವು ನಡೆಯುವ ಸಂಭವ ಇದೆ ಎಂದು ಗೊತ್ತಿದ್ದೂ ಪ್ರಚೋದಿಸುತ್ತಾ ಉದ್ರೇಕಕಾರಿಯಾಗಿ, ಸಾರ್ವಜನಿಕರ ಕೇಡಿಗೆ ಕಾರಣವಾಗುವ ಮಾಹಿತಿಯನ್ನು ಆಡಿಯೋ ಕ್ಲಿಪ್‌ ಮಾಡಿ ವಿದ್ಯುನ್ಮಾನ ಸಾಧನಗಳ ಮೂಲಕ  ವಾಟ್ಸಾಪ್‌ ನಲ್ಲಿ ಬಿತ್ತರಿಸಿರುತ್ತಾನೆ ಎಂದು ಪೊಲೀಸ್ ಇಲಾಖೆಗೆ ದೂರು ಬಂದಿದ್ದು ಮಲ್ಪೆ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗಂಗಪ್ಪ ಎಸ್‌ ಅವರಿಗೆ ದಿನಾಂಕ:25-03-2025ರಂದು ಈ ಆಡಿಯೋ ಕ್ಲಿಪ್‌ ಸಿಕ್ಕಿದ್ದು  ಆದರಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 57 ಜೊತೆಗೆ 189, 192, 353(1)(b) BNS ರಂತೆ ಪ್ರಕರಣ ದಾಖಲಾಗಿದೆ.  

error: No Copying!