
- ಮಣಿಪಾಲ: ದಿನಾಂಕ: 20-03-2025(ಹಾಯ್ ಉಡುಪಿ ನ್ಯೂಸ್) ಕಾಯಿನ್ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಮೂವರನ್ನು ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಅನಿಲ್ ಕುಮಾರ್ ಅವರು ಬಂಧಿಸಿದ್ದಾರೆ.
- ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಅನಿಲ ಕುಮಾರ್, ರವರು ದಿನಾಂಕ :14-03-2025ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ತಲ್ಲೂರು ವೈನ್ಸ್ ಬಳಿಯ ಸಾರ್ವಜನಿಕ ರಸ್ತೆಯಲ್ಲಿ 1. ಸಾಹಿಲ್ ಮೆಹ್ತಾ (20) ಮಾಂಡವಿ ಎಮರಾಲ್ಡ್, ಮಣಿಪಾಲ, 2 . ಶೌನಾಕ್ ಮುಖೋಪಧಾಯ್ ,(19) ಮಾಂಡವಿ ಎಮರಾಲ್ಡ್ ಮಣಿಪಾಲ, 3. ವಾಲುಸ್ಚಾ ಮಾರ್ಟಿನ್ಸ್ (20) ಮಾಂಡವಿ ಎಮರಾಲ್ಡ್ ಮಣಿಪಾಲ ಎಂಬ ಮೂವರು ಅಮಲಿನಲ್ಲಿದ್ದು, ಈ ಮೂವರು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಅವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
- ಅದೇ ದಿನ ಆರೋಪಿಗಳು ಗಾಂಜಾ ಸೇವನೆ ಮಾಡಿರುವ ಕುರಿತು ಪರೀಕ್ಷೆಗೆ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ದಿನಾಂಕ:17/03/2025 ರಂದು ಆರೋಪಿಗಳು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರ ನೀಡಿದ್ದಾರೆ ಎನ್ನಲಾಗಿದೆ.
- ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: ಕಲಂ 27 (b) NDPS ACT ರಂತೆ ಪ್ರಕರಣ ದಾಖಲಾಗಿದೆ.