Spread the love

ಬ್ರಹ್ಮಾವರ: ದಿನಾಂಕ :  20.03.2025 (ಹಾಯ್ ಉಡುಪಿ ನ್ಯೂಸ್) ಶಿರೂರು ಮೂರ್ ಕೈ ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ  ಅವರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಅವರು ದಿನಾಂಕ :20-03-2025 ರಂದು ಸಿಬ್ಬಂದಿಯವರೊಂದಿಗೆ ಮಂದಾರ್ತಿ ಬಳಿ ರೌಂಡ್ಸ್‌ ನಲ್ಲಿರುವಾಗ ಮಾಹಿತಿದಾರರೊಬ್ಬರು ಕರೆ ಮಾಡಿ ಹೆಗ್ಗೂಂಜೆ ಗ್ರಾಮದ ಶಿರೂರು ಮೂರ್‌ಕೈ ಎಂಬಲ್ಲಿ ಶುಭಲಕ್ಷ್ಮಿ ಬಾರ್‌ & ರೆಸ್ಟೊರೆಂಟ್‌ ಎದುರುಗಡೆ ಸಾರ್ವಜನಿಕ ರಸ್ತೆ ಬದಿಯಲ್ಲಿ ಆರೋಪಿ ಚಂದ್ರ ಎಂಬಾತನು ಜನರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟಕ್ಕಾಗಿ ಹಣವನ್ನು ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಮಾಹಿತಿ ಬಂದ ಮೇರೆಗೆ ಮಹಾಂತೇಶ ಅವರು ಸಿಬ್ಬಂದಿಗಳೊಂದಿಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ತಲುಪಿ  ನೋಡಿದಾಗ ಆರೋಪಿ ಚಂದ್ರ ಎಂಬವನು ರಸ್ತೆಯಲ್ಲಿ ಹೋಗುತ್ತಿದ್ದ ಜನರನ್ನು ಕೂಗಿ ಕರೆದು 00 ರಿಂದ 99 ರ ಒಳಗಿನ ನಂಬರ್‌ಗೆ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಜನರಿಂದ ಹಣವನ್ನು ಸಂಗ್ರಹಿಸಿ ಚೀಟಿಯಲ್ಲಿ ಬರೆಯುತ್ತಿದ್ದು, ಆತನು ಮಟ್ಕಾ ಜುಗಾರಿ ಆಟಕ್ಕಾಗಿ ಜನರಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದು ಪೊಲೀಸ್ ಸಿಬ್ಬಂದಿಯವರು ಅಲ್ಲಿಗೆ  ದಾಳಿ ಮಾಡಿ ಆರೋಪಿ ಚಂದ್ರ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ  ತಾನು ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಅಲ್ಲದೇ ತಾನು ಸಂಗ್ರಹಿಸಿದ ಹಣವನ್ನು ಒಟ್ಟು ಮಾಡಿ ಬಿಲ್ಲಾಡಿಯ ವಂಡಾರಿನ ನಿವಾಸಿ ಪವನ ಎಂಬವರಿಗೆ ನೀಡುತ್ತೇನೆ ಎಂದು ಹೇಳಿರುತ್ತಾನೆ ಎನ್ನಲಾಗಿದೆ.

ಆರೋಪಿಯು ಸಂಗ್ರಹಿಸಿದ್ದ ನಗದು ಹಣ ರೂ. 1900/-, ಮಟ್ಕಾ ಚೀಟಿ – 1, ಬಾಲ್‌ ಪೆನ್‌ -1 ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ U/S 78(i)(iii) KP ACT & U/S 112 BNS ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿದೆ.

error: No Copying!