Spread the love

ಉಡುಪಿ: ದಿನಾಂಕ 18/03/2025 (ಹಾಯ್ ಉಡುಪಿ ನ್ಯೂಸ್) ಬೀಡಿನ ಗುಡ್ಡೆಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ಕಾ & ಸು) ಪುನೀತ್ ಕುಮಾರ್ ಬಿ ಈ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಬಿ ಈ ಅವರು ದಿನಾಂಕ 16-03-2025 ರಂದು ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆಯ ಡಯಾನ ಟಾಕೀಸ್‌ ಬಳಿ ಕರ್ತವ್ಯದಲ್ಲಿ ಇರುವಾಗ ಬೀಡಿನ ಗುಡ್ಡೆ ಮಹಾತ್ಮ ಗಾಂಧಿ ಬಯಲು ರಂಗ ಮಂದಿರದ ಬಳಿ ಸಾರ್ವಜನಿಕ ಸ್ಥಳದಲ್ಲಿ 5-6 ಜನರ ವ್ಯಕ್ತಿಗಳ ಗುಂಪು ನೆಲದ ಮೇಲೆ ಕ್ಯಾಂಡಲ್‌ ಹಚ್ಚಿ ಕೂತುಕೊಂಡು ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಕೂಡಲೇ ಅಲ್ಲಿಗೆ ದಾಳಿ ನಡೆಸಿದ್ದಾರೆ.

ಮಾಹಿತಿ ಬಂದ ಸ್ಥಳದಲ್ಲಿ ಅಂದರ್‌-ಬಾಹರ್‌ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ 1)ನಾಗರಾಜ್, 2)ಯಮುನಪ್ಪ,3)ಮಂಜುನಾಥ, 4)ಅಮಿನ್‌ ಸಾಬ್‌, 5) ಸಿದ್ದಪ್ಪ , 6)ಗುರು, 7)ಪರಶುರಾಮ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ . ಆರೋಪಿಗಳು ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 32,800/-, ಇಸ್ಪೀಟು ಎಲೆಗಳು, ಕ್ಯಾಂಡಲ್ ಹಾಗೂ ಬೆಂಕಿಪಟ್ಟಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 87 ಕರ್ನಾಟಕ ಪೊಲೀಸ್ ಕಾಯಿದೆ & ಕಲಂ : 112 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!