
ಹಿರಿಯಡ್ಕ: ದಿನಾಂಕ 18/03/2025 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ ಮರಬದ ಅವರು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರಿಗೆ ದಿನಾಂಕ 17-03-2025 ರಂದು ಹಿರಿಯಡಕ ಪೇಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವನು ಮಟ್ಕಾ ಜೂಜಾಟಕ್ಕೆ ಚೀಟಿ ಬರೆದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವ ಬಗ್ಗೆ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ಸ್ಥಳದಲ್ಲಿ ಮಟ್ಕಾ ಜೂಜಾಟದ ಚೀಟಿಯನ್ನು ಬರೆಯುತ್ತಿದ್ದ ಪ್ರಶಾಂತ ಕುಮಾರ ಎಂಬಾತನನ್ನು ಹಿಡಿದು ಬಂಧಿಸಿ ಆತನ ಬಳಿಯಿದ್ದ 1570/- ರೂಪಾಯಿ ನಗದು, ಮಟ್ಕಾ ಬರೆದ ನೋಟ್ ಬುಕ್, ಬಾಲ್ ಪೆನ್ನು ಇದ್ದು ಇವುಗಳ ಬಗ್ಗೆ ಪೊಲೀಸರು ವಿಚಾರಿಸಿದಾಗ ತಾನು ಮಟ್ಕಾ ಚೀಟಿ ಬರೆದು ಸಂಗ್ರಹಿಸಿದ ಹಣವನ್ನು ಉಡುಪಿಯ ಲಿಯೋ ತೆಗೆದುಕೊಂಡು ಹೋಗುವುದಾಗಿ, ತಾನು ಮಟ್ಕಾ ಚೀಟಿ ಬರೆದು ಹಣವನ್ನು ಸಂಗ್ರಹಿಸಿ ನೀಡಿದರೆ ಲಿಯೋ ನನಗೂ ಸಹ ಪ್ರತಿಫಲವನ್ನು ನೀಡುವುದಾಗಿ ವಿಚಾರಣೆಯಲ್ಲಿ ತಿಳಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ:78(1)(3) KP ACT,ಕಲಂ: 112 BNS ರಂತೆ ಪ್ರಕರಣ ದಾಖಲಾಗಿದೆ.