
ಕುಂದಾಪುರ: ದಿನಾಂಕ 11/03/2025 (ಹಾಯ್ ಉಡುಪಿ ನ್ಯೂಸ್) ಕುಂಭಾಶಿ ಗ್ರಾಮದ ಸರಕಾರಿ ಹಾಡಿ ಯೊಂದರಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದಲ್ಲಿಗೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್ ಅವರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್ ಅವರು ದಿನಾಂಕ : 10-03-2025 ರಂದು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ಕುಂಬಾಶಿ ಗ್ರಾಮದ ಕೊರವಾಡಿ ಮಲಸಾವರಿ ದೈವಸ್ಥಾನದ ಬಳಿ ಸರಕಾರಿ ಹಾಡಿ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಕೂಡಲೇ ದಾಳಿ ಮಾಡಿದ್ದಾರೆ .
ದಾಳಿ ನಡೆಸಿದಾಗ ಅಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 3 ಜನರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಟಾರ್ಪಲ್, ಇಸ್ಪೀಟ್ ಎಲೆಗಳು, ನಗದು ರೂಪಾಯಿ 1350/-, ಕ್ಯಾಂಡಲ್ ಹಾಗೂ ಆಪಾದಿತ ಸುರೇಶ ಎಂಬವನ ಬಜಾಜ್ ಪಲ್ಸರ್ ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಓಡಿ ಹೋದವರ ಹೆಸರು ವಿಳಾಸ ವಿಚಾರಣೆ ನಡೆಸಿದಾಗ 1. ರಾಜು 2. ಬಸವ 3. ಬೂದ ಎಂಬುದಾಗಿ ಆಪಾದಿತರು ತಿಳಿಸಿರುತ್ತಾರೆ ಎನ್ನಲಾಗಿದೆ .
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ:112 BNS, 87 KP ACT ರಂತೆ ಪ್ರಕರಣ ದಾಖಲಾಗಿದೆ.