
ಕಾಪು: ದಿನಾಂಕ: 08-03-2025 (ಹಾಯ್ ಉಡುಪಿ ನ್ಯೂಸ್) ಮುಂಬಯಿಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ರಧ್ಧ ದಂಪತಿಗಳ ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನು ಯಾರೋ ಸಹ ಪ್ರಯಾಣಿಕರು ಕಳ್ಳತನ ನಡೆಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನಂಜೆ ನಿವಾಸಿ ಕೇಶವ (84) ಹಾಗೂ ಅವರ ಪತ್ನಿ ಶಾಂಭವಿ ರವರು ದಿನಾಂಕ 08/02/2025 ರಂದು ಮುಂಬಯಿಯ ಪನ್ವೇಲ್ ರೈಲ್ವೇ ನಿಲ್ದಾಣದಿಂದ ಲೋಕಮಾನ್ಯ ತಿಲಕ್ – ಕೊಚ್ಚುವಳಿ ಎಕ್ಸ್ಪ್ರೆಸ್ ರೈಲು ನಂಬ್ರ 22113 ರಲ್ಲಿ ಕೋಚ್ ನಂಬ್ರ S – 9 ಸೀಟ್ ನಂಬ್ರ 57, 60 ರಲ್ಲಿ ಸಂಜೆ 5.55 ಗಂಟೆಗೆ ಉಡುಪಿಗೆ ಪ್ರಯಾಣಿಸಿದ್ದು, ದಿನಾಂಕ 09.02.2025 ರಂದು ಬೆಳಿಗ್ಗೆ 08.48 ಗಂಟೆಗೆ ಉಡುಪಿ ರೈಲ್ವೇ ನಿಲ್ದಾಣದಲ್ಲಿ ಇಳಿದು ಇನ್ನಂಜೆ ಮಡುಂಬು ಎಂಬಲ್ಲಿರುವ ಶಾಂಭವಿ ರವರ ಮನೆಗೆ ತೆರಳಿ ಬೆಳಿಗ್ಗೆ ಸುಮಾರು 09.30 ಗಂಟೆಗೆ ತಮ್ಮ ಬ್ಯಾಗನ್ನು ಪರಿಶೀಲಿಸಿದಾಗ ಬ್ಯಾಗ್ನಲ್ಲಿ ಬಟ್ಟೆಯ ಮಧ್ಯೆ ಕಟ್ಟಿ ಇಟ್ಟಿದ್ದ 85 ಗ್ರಾಂ ಚಿನ್ನ ಕಳವಾಗಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ ಸುಮಾರು 08.15 ಗಂಟೆಗೆ ರೈಲು ಬಾರ್ಕೂರು ರೈಲ್ವೇ ನಿಲ್ದಾಣ ದಾಟುತ್ತಿದ್ದಂತೆ ಕೇಶವರವರು ಉಡುಪಿಯಲ್ಲಿ ರೈಲಿನಿಂದ ಇಳಿಯಲು ತಯಾರಿ ನಡೆಸುತ್ತಿದ್ದಾಗ ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ಕೇಶವ ರವರಿಗೆ ಸಹಕರಿಸಲು ಬಂದಿದ್ದು, ಈ ಅಪರಿಚಿತ ವ್ಯಕ್ತಿಗಳು ಬ್ಯಾಗ್ನಲ್ಲಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಸಂದೇಹವಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೇಶವರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 305(c) BNS ರಂತೆ ಪ್ರಕರಣ ದಾಖಲಾಗಿದೆ.