
ಬಾಗಲಕೋಟೆ : ದಿನಾಂಕ 05-03-2025(ಹಾಯ್ ಉಡುಪಿ ನ್ಯೂಸ್) ಜಮಖಂಡಿ ತಾಲೂಕಿನ ಮಧುರಖಂಡಿಯಲ್ಲಿ ನಡೆದ ಗವಿ ಮಠ ಪ್ರತಿಷ್ಠಾನದ”ಬೆಳ್ಳಿ ಬೆಳಕು” ಸಂಭ್ರಮದ ನಿಮಿತ್ಯ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಸಾಧಕ ಶ್ರೇಷ್ಠ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬದಾಮಿ ತಾಲೂಕಿನ ಶಿಕ್ಷಕರುಗಳಾದ ಹುಸೇನ್ ಬಾಯಿ ದಂಪತಿಗಳು, ಅಶ್ವಿನಿ ಅಂಗಡಿ, ನಾಗರಾಜ, ಜಾದವ್, ನಾಯಕ, ಪಾಟೀಲ್, ಚಿಕ್ಕೂರ್ ಹಾಗೂ ಸೂಳಿಕೇರಿ ಶಿಕ್ಷಕರುಗಳಿಗೆ “ಗುರು ಶ್ರೇಷ್ಠ ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀಶಂಕರಗೌಡ ಸೋಮನಾಳ ಕುಲ ಸಚಿವರು ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ, ಮುಖ್ಯ ಅತಿಥಿಗಳಾಗಿ ಶ್ರೀ ಶಿವಾನಂದ ಶೇಲ್ಲಿಕೆರೆ ಅಧ್ಯಕ್ಷರು ಜಿಲ್ಲಾ ಕ ಸಾ ಪ ಬಾಗಲಕೋಟೆ , ಶ್ರೀ ಎಮ್ ವಿವೇಕಾನಂದ ಉಪನಿರ್ದೇಶಕರು ಸಾ ಶಿ ಇ , ಶ್ರೀ ಶಾಂತವೀರ ಪೊಲೀಸ್ ಅಧಿಕಾರಿ ಜಮಖಂಡಿ , ಶ್ರೀ ಬಿ ಪಿ ಬಾಗೇನ್ನವರ್ ಅಧ್ಯಕ್ಷರು ಜಿ ಪ್ರಾ ಶಾ ಶಿ ಸಂ ಬಾಗಲಕೋಟೆ, ಶ್ರೀ ಎ ಕೆ ಬಸಣ್ಣವರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ , ಹಾಗೂ ಇನ್ನಿತರ ಮುಖ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.