
ಉಡುಪಿ: ದಿನಾಂಕ:02-03-2025(ಹಾಯ್ ಉಡುಪಿ ನ್ಯೂಸ್)
ಪರ್ಯಾಯ ಶ್ರೀ ಪುತ್ತಿಗೆ ಮಠದ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂಕಲ್ಪಿಸಿರುವ ಕೋಟಿ ಗೀತಾ ಲೇಖನ ಯಜ್ಞದ ಭಾಗವಾಗಿ ಬ್ರಹ್ಮಾವರದ ಸುಶಾಂತ್ ಅವರು ಸಮಗ್ರ ಭಗವದ್ಗೀತೆಯನ್ನು ಐದುಕಾಲು ಘಂಟೆಯಲ್ಲಿ ಬರೆದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವ ದಾಖಲೆ ರಚಿಸಿದ್ದಾರೆ.
ಪತಂಜಲಿ ಗುರುಕುಲದ ಶಿಷ್ಯರು ಈ ಹಿಂದೆ 8 ಘಂಟೆ ಯಲ್ಲಿ ಸಮಗ್ರ ಭಗವದ್ಗೀತೆಯನ್ನು ಬರೆದು ದಾಖಲೆ ಮಾಡಿದ್ದರು. ಇದೀಗ ಹೊಸ ದಾಖಲೆ ಬರೆದಿರುವ ಸುಶಾಂತ್ ಅವರನ್ನು ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ಅನುಗ್ರಹಿಸಿದ್ದಾರೆ.