Spread the love

ಬ್ರಹ್ಮಾವರ: ದಿನಾಂಕ: 02-03-2025(ಹಾಯ್ ಉಡುಪಿ ನ್ಯೂಸ್) ಬಸ್ ಟೈಮಿಂಗ್ ವಿಚಾರದಲ್ಲಿ ಬಸ್ ಕಂಡಕ್ಟರ್ ಇನ್ನೊಂದು ಬಸ್ಸಿನ ಚಾಲಕನಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ತೆಂಕ ಎರ್ಮಾಳು ಗ್ರಾಮದ ನಿವಾಸಿ ಇಮ್ತಿಯಾಜ್ (44) ಎಂಬವರು ಸುಮಾರು 08 ವರ್ಷಗಳಿಂದ A.K.M.S ಬಸ್ಸಿನಲ್ಲಿ ಡ್ರೈವರ್‌ ಆಗಿ ಕೆಲಸ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 01/03/2025 ರಂದು KA-20-A-7676 ನೇ ಬಸ್ ಅನ್ನು ಕುಂದಾಪುರದಿಂದ ಉಡುಪಿ ಕಡೆಗೆ ಪ್ರಯಾಣಿಕರನ್ನು ಕೂರಿಸಿಕೊಂಡು ಹೊರಟು ತೆಕ್ಕಟ್ಟೆ ಬರುವಾಗ ಸೆಲೀನ್‌ ಬಸ್ ನಂಬರ್‌ KA-20-AA-6790 ನೇ ಬಸ್‌ ಅನ್ನು ಅದರ ಚಾಲಕ ನಿಗದಿತ ಸಮಯಕ್ಕೆ ಹೋಗದೆ ತಡವಾಗಿ ಹೋಗಿರುತ್ತಾನೆ ಎಂದಿದ್ದಾರೆ.

ಇಮ್ತಿಯಾಜ್ ರು ಸರಿಯಾದ ಸಮಯಕ್ಕೆ ಬಸ್ಸನ್ನು ಚಲಾಯಿಸಿಕೊಂಡು ಹೊರಟು ಸಾಸ್ತಾನದಲ್ಲಿ ಸೆಲಿನ್‌ ಬಸ್ಸನ್ನು ಓವರ್‌ ಟೇಕ್ ಮಾಡಿ ಬ್ರಹ್ಮಾವರ ಬಸ್‌ ನಿಲ್ದಾಣಕ್ಕೆ ಸಂಜೆ ಸುಮಾರು 5.40 ಗಂಟೆಗೆ ಬಂದಾಗ ಸೆಲಿನ್‌ ಬಸ್ಸನ್ನು  ಇಮ್ತಿಯಾಜ್ ರ ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿ ಸೆಲಿನ್‌ ಬಸ್ಸ್‌ನ ಕಂಡಕ್ಟರ್‌ ಶೌಕತ್‌ ಎಂಬವನು ಇಮ್ತಿಯಾಜ್ ರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ನಿನಗೆ ಕೆಲಸ ಮಾಡಲು ಬಿಡುವುದಿಲ್ಲ  ಎಂದು ಹೇಳಿದ್ದು  ಹಾಗೂ ಉಡುಪಿಯಲ್ಲಿ ಸಿಕ್ಕಾಗ ನಿನಗೆ ನಾನು ಬಿಡುವುದಿಲ್ಲ ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಇಮ್ತಿಯಾಜ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 126(2), 352, 351(2), BNS ರಂತೆ ಪ್ರಕರಣ ದಾಖಲಾಗಿದೆ.

error: No Copying!