Spread the love

ಉಡುಪಿ: ದಿನಾಂಕ:02-03-2025 (ಹಾಯ್ ಉಡುಪಿ ನ್ಯೂಸ್)  ಸಾಲ ಮರುಪಾವತಿ ಮಾಡಲು ವಿಳಂಬವಾದ ಕಾರಣಕ್ಕೆ ಫೈನಾನ್ಸ್ ಸಂಸ್ಥೆಯವರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕೊರಂಗ್ರಪಾಡಿ ಗ್ರಾಮದ ಬೈಲೂರು ನಿವಾಸಿ ಶಂಶಾದ್ (53)  ಎಂಬವರು ಹಾಗೂ ಅವರ ಮಗಳಾದ ಶಹನಾಝ್ ರವರು ಮಂಗಳೂರಿನ ಸುರತ್ಕಲ್ ನಲ್ಲಿರುವ ಸಾನಿಧ್ಯ ಫೈನಾನ್ಸ್ ನಿಂದ ತಲಾ 30,000/- ರೂಪಾಯಿ ಹಣವನ್ನು ಸಾಲ ಪಡೆದುಕೊಂಡಿದ್ದು. ಸಾಲದ ಕಂತುಗಳನ್ನು ಪ್ರತಿ ತಿಂಗಳು ಗೂಗಲ್ ಪೇ ಮುಖಾಂತರ ಫೈನಾನ್ಸ್ ರವರಿಗೆ ಪಾವತಿ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿರದ ಕಾರಣ ಶಂಶಾದ್ ರವರು ಹಾಗೂ ಅವರ ಮಗಳು ಸಾಲದ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟದೇ ಬಾಕಿ ಇದ್ದು, ಫೈನಾನ್ಸ್ ರವರು ಆಗಾಗ ಮನೆಗೆ ಬಂದು ಸಾಲದ ಕಂತಿನ ಹಣವನ್ನು ಚಕ್ರಬಡ್ಡಿ ಜೊತೆ ಮರುಪಾವತಿ ಮಾಡುವಂತೆ ಪೀಡಿಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಫೈನಾನ್ಸ್ ನವರಲ್ಲಿ ಸಾಲದ ಕಂತನ್ನು ಪಾವತಿ ಮಾಡಲು ಸಮಯಾವಕಾಶ ಕೋರಿಕೊಂಡರು ಸಹಾ ಕಾಲಾವಕಾಶವನ್ನು ನೀಡದೇ ಇದ್ದು, ದಿನಾಂಕ: 25-02-2025 ರಂದು ಮಧ್ಯಾಹ್ನ  ಫೈನಾನ್ಸ್ ನ ಓರ್ವ ಸಿಬ್ಬಂದಿಯು ಶಂಶಾದ್ ರ ಮನೆಗೆ ಅಕ್ರಮ ಪ್ರವೇಶ ಮಾಡಿ, ಶಂಶಾದ್ ರು ಹಾಗು ಅವರ ಮಗಳಿಗೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು , ನೀವು ಈಗಲೇ ಫೈನಾನ್ಸ್ ನಿಂದ ಪಡೆದ ಸಾಲದ ಹಣವನ್ನು ವಾಪಸ್ಸು ಕೊಡಬೇಕು ಇಲ್ಲದಿದ್ದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಶಂಶಾದ್ ರವರು ಸಾಲದ ಕಂತನ್ನು ಕಟ್ಟಲು ಸಮಯಾವಕಾಶವನ್ನು ಕೋರಿದರು ಕೂಡ ಅದನ್ನು ಲೆಕ್ಕಿಸದೇ ಅವಮಾನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ   u/s THE BHARATIYA NYAYA SANHITA (BNS), 2023 (U/s-329(4), 351(2), 352); The Karnataka Micro Loan And Small Loan (Prevention of Coercive Actions) Ordinance 2025 (U/s-8,12) ರಂತೆ ಪ್ರಕರಣ ದಾಖಲಾಗಿದೆ.

error: No Copying!