
ದಿನಾಂಕ:01-03-2025 (ಹಾಯ್ ಉಡುಪಿ ನ್ಯೂಸ್)

ಕೋಟ: ಕಲಾಪೀಠ ಕೋಟ ಸಂಸ್ಥೆಯು, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ದೊಂದಿಗೆ ಕೋಟೇಶ್ವರದ ಶಾಂತಿಧಾಮ ಪೂರ್ವ ಗುರುಕುಲದಲ್ಲಿ ಯಕ್ಷಗಾನ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಸಂಗೀತ ಶಿಕ್ಷಕ ಸತೀಶ ಭಟ್ಟ ತಾಳವನ್ನು ನುಡಿಸುವುದರೊಂದಿಗೆ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾಪೀಠ ಸಂಸ್ಥೆಯ ಕಾರ್ಯದರ್ಶಿ ಕೆ. ನರಸಿಂಹ ತುಂಗ ಮಕ್ಕಳು ತಮ್ಮ ಶಿಕ್ಷಣದೊಂದಿಗೆ ಕಲೆ ಸಾಹಿತ್ಯ ಸಂಗೀತ ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಬೇಕು. ಇದರಿಂದ ಸಭಾ ಕಂಪನ ದೂರವಾಗುವುದರ ಜೊತೆಗೆ ಶಿಕ್ಷಣದಲ್ಲಿಯೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಹಾಗೆಯೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿಕೊಂಡ ಶಾಂತಿಧಾಮ ಪೂರ್ವ ಗುರುಕುಲದ ವಿಶ್ವಸ್ಥರಾದ ಕೃಷ್ಣರಾಯ ಶಾನುಭಾಗ್ ಯಕ್ಷಗಾನವು ಮಕ್ಕಳಲ್ಲಿ ಬುದ್ಧಿವಂತಿಕೆಯ ಜೊತೆಗೆ ಹೃದಯವಂತಿಕೆಯನ್ನು ಅರಳಿಸುತ್ತಾ ಸಂಪೂರ್ಣ ಪ್ರಾಜ್ಞರನ್ನಾಗಿ ಮಾಡುತ್ತದೆ. ಯಕ್ಷಗಾನ ಕಲಿಯುವುದರಿಂದ ದೇಹಕ್ಕೂ ಹಾಗೂ ಮನಸ್ಸಿಗೆ ವ್ಯಾಯಾಮ ನೀಡುತ್ತದೆ. ಯಕ್ಷಗಾನದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿ ಮುಂದೆ ನಾಡಿನ ಉತ್ತಮ ಪ್ರಜೆಯಾಗುವುದರಲ್ಲಿ ಸಂದೇಹವಿಲ್ಲ ಮಕ್ಕಳಿಗೆ ಮುಂದೆ ಜೀವನದಲ್ಲಿ ಬರುವ ಎಲ್ಲಾ ಸಂದಿಗ್ದ ಪರಿಸ್ಥಿತಿಗಳನ್ನು ವಿಶ್ವಾಸದಿಂದ ಎದುರಿಸುವ ಧೈರ್ಯ ಬರುತ್ತದೆ. ಸ್ವಸ್ಥ ಸಮಾಜವನ್ನು ಕಟ್ಟುವಲ್ಲಿ ಈ ಮಕ್ಕಳು ಮುಂದೆ ಬದ್ಧರಾಗುತ್ತಾರೆ ಎಂದರು. ಲೇಖಕ, ಕಲಾವಿದ ಮನೋಹರ ಪೈ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಖ್ಯ ಶಿಕ್ಷಕರಾದ ಅನಂತ ಸ್ಮರಣಿಕೆ ನೀಡಿ ಗೌರವಿಸಿದರು.
ಕಲಾಪೀಠ ಕೋಟ ಸಂಸ್ಥೆಯು, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ದೊಂದಿಗೆ ಕೋಟೇಶ್ವರದ ಶಾಂತಿಧಾಮ ಪೂರ್ವ ಗುರುಕುಲದಲ್ಲಿ ಯಕ್ಷಗಾನ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಸಂಗೀತ ಶಿಕ್ಷಕರಾದ ಸತೀಶ ಭಟ್ಟ ತಾಳವನ್ನು ನುಡಿಸುವುದರೊಂದಿಗೆ ಉದ್ಘಾಟಿಸಿದರು. ಕಲಾಪೀಠ ಸಂಸ್ಥೆಯ ಕಾರ್ಯದರ್ಶಿ ಕೆ. ನರಸಿಂಹ ತುಂಗ. ಶಾಂತಿಧಾಮ ಪೂರ್ವ ಗುರುಕುಲದ ವಿಶ್ವಸ್ಥರಾದ ಕೃಷ್ಣರಾಯ ಶಾನುಭಾಗ್ ಇದ್ದರು.