
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಗೆ ಗುರುವಾರ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀನಿವಾಸ ರಾವ್ ಅವರು ಭೇಟಿ ನೀಡಿ ಗ್ರಾಮ ಪಂಚಾಯತ್ ಪ್ರಗತಿ ಪರಿಶೀಲನೆ ನಡೆಸಿದರು.
ಸತತ ಹತ್ತು ವರ್ಷದಿಂದ ಪಂಚಾಯತ್ ತೆರಿಗೆ ಮತ್ತು ಶುಲ್ಕ ಸಂಗ್ರಹ ನಗದು ರಹಿತ ಡಿಜಿಟಲ್ ವ್ಯವಸ್ಥೆಯನ್ನು
ಅನುಷ್ಠಾನಗೊಳಿಸಿ ರಾಜ್ಯಕ್ಕೆ ಮಾದರಿಯಾಗಿರುವುದನ್ನು ಮುಕ್ತಕಂಠದಿoದ ಶ್ಲಾಘಿಸಿದರು. ಅಲ್ಲದೇ ಪ್ರತಿ ವರ್ಷ 98ಕ್ಕೂ ಶೇ/ ಅಧಿಕ ತೆರಿಗೆ ಸಂಗ್ರಹ, ಸಾಮಾನ್ಯ ಸಭೆ ಇತ್ಯಾದಿ ಸಭೆಗಳ ಡಿಜಿಟಲಿಕರಣ, 2005ರಿಂದ ಗ್ರಾಮ
ಪಂಚಾಯತ್ ನೇತೃತ್ವದಲ್ಲಿ ಹುಟ್ಟೂರ ಸನ್ಮಾನ, ಹೊಳಪು ಕಾರ್ಯಕ್ರಮ, ತಂತ್ರಾoಶ ಆಧಾರಿತ ಕಸ ಮತ್ತು ನೀರಿನ ಶುಲ್ಕ ಸಂಗ್ರಹಣೆ , ಒಟ್ಟಾರೆ 90ಲಕ್ಷ ವೆಚ್ಚದಲ್ಲಿ ಸರಕಾರ ಹಾಗೂ ದಾನಿಗಳಿಂದ 8 ಪರಿಶಿಷ್ಟ ಪಂಗಡ ಕೊರಗರ ಮನೆ ನಿರ್ಮಾಣ, ವಿವಿಧ ಅನುದಾನಗಳಿಂದ ಸುಸಜ್ಜಿತ ಸ್ಮಶಾನ ನಿರ್ಮಾಣ, ಸುಸ್ಥಿರ ಒಣಕಸ ನಿರ್ವಹಣೆ ಇವುಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ಜಿಲ್ಲೆಯ ಐಎಎಸ್ ಅಧಿಕಾರಿಯೊಬ್ಬರು ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಎರಡು ಗಂಟೆಗೂ ಹೆಚ್ಚು ಕಾಲ ಪ್ರಗತಿ ಪರಿಶೀಲನೆ ನಡೆಸಿರುವುದು
ಇನ್ನಷ್ಟು ಜನಪರ ಕಾರ್ಯ ಮಾಡಲು ಆತ್ಮಸ್ಥೆರ್ಯ ಹೆಚ್ಚಿದೆ ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್ ಬಾರಿಕೆರೆ ಅವರು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಿ.ಇಓ ಪ್ರತೀಕ್ ಬಾಯಲ್ 10ವರ್ಷಗಳಿಂದ ನಗದು ರಹಿತ ತೆರಿಗೆ ಸಂಗ್ರಹ, ಸೂಕ್ತ ಕಸ
ವಿಲೇವಾರಿ, ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಸಾಂಸ್ಕತಿಕ ಕಾರ್ಯಕ್ರಮ, ಸಂಪೂರ್ಣ ಡಿಜಿಟಲಿಕರಣ, ಆಡಳಿತದಲ್ಲಿ ಪಾರದರ್ಶಕತೆ ಮೂಲಕ ರಾಷ್ಟ್ರದ
ಗಮನ ಸೆಳೆದಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ, ಸದಸ್ಯ ವಾಸು ಪೂಜಾರಿ, ಪ್ರಮೋದ್ ಹಂದೆ, ಪ್ರಕಾಶ್ ಹಂದಟ್ಟು, ರವೀಂದ್ರ
ತಿoಗಳಾಯ, ರಾಬರ್ಟ್ ರೋಡ್ರಿಗಸ್, ಜ್ಯೋತಿ, ಸೀತಾ, ವಿದ್ಯಾ, ಸಾಹಿರ ಬಾನು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ
ಅಂಚನ್ ಮತ್ತು ಪಂಚಾಯತ್ ಸಿಬ್ಬoದಿಗಳು ಉಪಸ್ಥಿತರಿದ್ದರು.