Spread the love

ಕೋಡಿ- ಸಿಹಿ ನೀರಿನಲ್ಲಿ ಮುತ್ತು ಕೃಷಿ ಮತ್ತು ಅಲಂಕಾರಿಕ ಮೀನು ಸಾಕಾಣಿಕೆ ಹಾಗೂ ಪಚ್ಚಿಲೇ ಮತ್ತು ಕಲ್ಲದಿಂದ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾಯೋಗಿಕ ಮಾಹಿತಿ ಕಾರ್ಯಗಾರ

ಕೋಟ: ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಭಾ. ಕೃ. ಅ. ಪ. – ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಸ್ಕೊಡ್ವೆಸ್ ಸಂಸ್ಥೆ, ಆಯುಶ್ಮಾನ್ ಭವ ಸಂಸ್ಥೆ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ. ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಆಶ್ರಯದಲ್ಲಿ ಸಿಹಿ ನೀರಿನಲ್ಲಿ ಮುತ್ತು ಕೃಷಿ ಮತ್ತು ಅಲಂಕಾರಿಕ ಮೀನು ಸಾಕಾಣಿಕೆ ಹಾಗೂ ಪಚ್ಚಿಲೇ ಮತ್ತು ಕಲ್ಲದಿಂದ ಮೌಲ್ಯವರ್ಧಿತ
ಉತ್ಪನ್ನಗಳ ಪ್ರಾಯೋಗಿಕ ಮಾಹಿತಿ ಕಾರ್ಯಗಾರ ಗುರುವಾರ ಕೋಡಿ ಪರಿಸರದಲ್ಲಿ ಜರಗಿತು.

ಉಡುಪಿ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ರೈತರು ಮತ್ತು ಮೀನುಗಾರರ ಶ್ರೇಯೋಭಿವೃದ್ಧಿಗೆ ಉಡುಪಿ ಕಿನಾರ ಮೀನುಗಾರರ ಮತ್ತು
ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಕಾರ್ಯ ನಿರ್ವಹಿಸುವುದರ ಬಗ್ಗೆ ಶ್ಲಾಘಿಸಿದರಲ್ಲದೆ ಇಂಥಹ ಉದ್ಯಮಿ ಉದ್ಯಮರಂಗದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಪ್ರಶಂಸಿಸಿ ಉಡುಪಿ ಕಿನಾರ ಕಂಪನಿಯ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆಕ್ಕಾಗಿ ಯುಕೆ ಟೆಸ್ಟಿ ಆ್ಯಪ್‌ನ್ನು ಅನಾವರಣಗೊಳಿಸಿದರು.

ಮೀನುಗಾರರ ಬಳಿ ಅಧಿಕಾರಿಗಳು ಸೌಮ್ಯ ರೀತಿಯಲ್ಲಿ ನಡೆದುಕೊಂಡು ಗೌರವಿಸಬೇಕೆಂದು ಮoಗಳೂರು ಮೀನಿಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಮೀನುಗಾರರೊಂದಿಗೆ ಸರಳತೆ ಮೆರೆದ ಸಿ.ಎಸ್ ಕಾರ್ಯಕ್ರಮಕ್ಕೆ ಆಗಮಿಸಿದ ಸಿ.ಎಸ್ ಪ್ರತೀಕ್ ಬಾಯಲ್ ಸಭಾ ಕಾರ್ಯಕ್ರಮದ ನಂತರ
ಮಾಹಿತಿ ಕಾರ್ಯಾಗಾರದಲ್ಲಿ ಮೀನುಗಾರರ ಜೊತೆ ಕುಳಿತು ಮಾಹಿತಿ ಪಡೆದರು ಅಲ್ಲದೆ ಬಡ ಮೀನುಗಾರರ ಮನೆಯಲ್ಲಿ ಎಲ್ಲರ ಜೊತೆ ಭೋಜನ ಸವಿದು ಸರಳತೆಯನ್ನು ಮೆರೆದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎ.ಎ. ಫಝಲ್, ಪ್ರಜ್ವಲ್.ಎಸ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ
ಡಾ.ಧನಂಜಯ್.ಬಿ , ಉಡುಪಿ ಜಿಲ್ಲಾ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್ , ಉತ್ತರಕನ್ನಡ ಜಿಲ್ಲಾ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಬಿನ್ ಬೊಪಣ್ಣ.ಕೆ ಉಡುಪಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎ.ಶ್ರೀನಿವಾಸ ರಾವ್, ಕೋಟ ಪಡುಕರೆ ಲಕ್ಷ್ಮೀ ಸೋಮ
ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್ ನಾಯಕ್ ,ಕೋಡಿ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ತೋಳಾರ್ ಒಷಿಯನ್ ಪ್ರಾಡಕ್ಟ್ಸ್ ಪ್ರಧಾನ ವ್ಯವಸ್ಥಾಪಕ ಯೋಗೀಶ್, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಅಧ್ಯಕ್ಷ ಲೋಹಿತ್ ಖಾರ್ವಿ, ಅಮೃತೇಶ್ವರಿ ರೈತ
ಉತ್ಪಾದಕ ಕಂಪನಿ ಅಧ್ಯಕ್ಷೆ ಬೇಬಿ ಮೆಂಡನ್, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿಯ ನಿರ್ದೇಶಕರಾದ ಸುದಿನ ಕೋಡಿ, ಪುಷ್ಪಾ ಶೆಟ್ಟಿ, ಕಾರ್ತೀಕ, ಅಕ್ಷಯ, ರಾಹುಲ್, ವಿದೀಕ್ಷಾ,.ಸಿಬ್ಬಂದಿಗಳಾದ ಭೂಮಿಕಾ, ಸುಶ್ಮಿತಾ, ಮಾನಸ ಸ್ವಾತಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಸ್ಥೆಯ ಗಂಗಾಧರ್ ನಾಯಕ್ ನಿರೂಪಿಸಿದರು. ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾ
ಪಂಚಾಯತ್-ಉಡುಪಿ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಯಗಳ ಆಶ್ರಯದಲ್ಲಿ ಸಿಹಿ ನೀರಿನಲ್ಲಿ ಮುತ್ತು ಕೃಷಿ ಮತ್ತು ಅಲಂಕಾರಿಕ ಮೀನು ಸಾಕಾಣಿಕೆ ಹಾಗೂ ಪಚ್ಚಿಲೇ ಮತ್ತು ಕಲ್ಲದಿಂದ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾಯೋಗಿಕ ಮಾಹಿತಿ ಕಾರ್ಯಗಾರವನ್ನು ಉಡುಪಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಉದ್ಘಾಟಿಸಿದರು.

error: No Copying!