Spread the love
  • ಮಣಿಪಾಲ: ದಿನಾಂಕ 18/02/2025 (ಹಾಯ್ ಉಡುಪಿ ನ್ಯೂಸ್) ವಿದ್ಯಾ ರತ್ನ ನಗರದ ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ಅನೀಲ್‌ ಕುಮಾರ್‌ ಡಿ ಅವರು ಬಂಧಿಸಿದ್ದಾರೆ.
  • ಮಣಿಪಾಲ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಅನಿಲ್ ಕುಮಾರ್ ಡಿ ಅವರು ದಿನಾಂಕ : 16-02-2025 ರಂದು ಠಾಣೆಯಲ್ಲಿದ್ದಾಗ ಉಡುಪಿ ತಾಲೂಕು ಮಣಿಪಾಲ ಶಿವಳ್ಳಿ ಗ್ರಾಮದ  ವಿದ್ಯಾರತ್ನ  ನಗರದ  ಒಡಿಸ್ಸಿ  ಕಟ್ಟಡದ ಬಳಿಯ  ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು  ಕಾರಿನಲ್ಲಿ  ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾರೆ  ಎಂದು ಬಂದ ಖಚಿತ ಮಾಹಿತಿ ಮೇರೆಗೆ  ಕೂಡಲೇ ದಾಳಿ ಮಾಡಿದ್ದಾರೆ .
  • ಸ್ಥಳದಲ್ಲಿ ಇದ್ದ ಆರೋಪಿಗಳಾದ 1. ಇಕ್ಬಾಲ್‌ 2. ಕೃಷ್ಣ 3. ಚೇತನ್‌ ಎಂಬವರನ್ನು  ಹಾಗೂ ಅವರ ವಶದಲ್ಲಿದ್ದ  86.25 ಗ್ರಾಂ ಗಾಂಜಾ  ಮತ್ತು 1.93 ಗ್ರಾಂ MDMA ಹಾಗೂ  ಮಾರುತಿ  ಸುಜುಕಿ  ಗ್ರೇ  ಕಪ್ಪು ಬಣ್ಣದ ಕಾರನ್ನು ವಶಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ:  8(c) 20(b)(ii)(A) 21(a) NDPS ACT ರಂತೆ ಪ್ರಕರಣ ದಾಖಲಾಗಿದೆ .    
error: No Copying!