Spread the love

ಬ್ರಹ್ಮಾವರ: ದಿನಾಂಕ:18-02-2025(ಹಾಯ್ ಉಡುಪಿ ನ್ಯೂಸ್) ದೂಪದಕಟ್ಟೆ -ಹೊನ್ನಾಳ ಸಾರ್ವಜನಿಕ ರಸ್ತೆ ಬದಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದವರನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಮಹಾತೇಂಶ ಅವರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ ಪಿಎಸ್ಐ ಯವರಾದ ಮಹಾಂತೇಶ ಅವರು ದಿನಾಂಕ:17-02-2025 ರಂದು ಸಿಬ್ಬಂದಿಯವರೊಂದಿಗೆ ಬೈಕಾಡಿ ಗ್ರಾಮದಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಮಾಹಿತಿ ದಾರರೋರ್ವರು ಕರೆ ಮಾಡಿ ಬೈಕಾಡಿ ಗ್ರಾಮದ ಅಮ್ಮ ಹೋಟೆಲ್‌ ಬಳಿ ಹಾದುಹೋಗಿರುವ ದೂಪದಕಟ್ಟೆ-ಹೊನ್ನಾಳ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೆಲವು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ನೀಡಿದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಯವರು ಮಾಹಿತಿ ಬಂದ  ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿದಾಗ ಅಲ್ಲಿ ಆರೋಪಿಗಳೂ ಜನರನ್ನು ಸೇರಿಸಿಕೊಂಡು ಒಳಗಡೆ 100 ಹೊರಗಡೆ 100 ಎಂದು ಕೂಗಿ ಹೇಳಿ ನೆಲಕ್ಕೆ ಹಾಸಿದ್ದ ಕೇಸರಿ ಶಾಲಿನ ಮೇಲೆ ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಸುತ್ತಲೂ ಕುಳಿತ್ತಿದ್ದವರು 100 ಹೊರಗೆ 100 ಒಳಗೆ ಎಂದು ಹೇಳಿ ಹಣವನ್ನು ಹಾಕುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಸೇರಿ ಹಣವನ್ನು ಪಣವಾಗಿರಿಸಿ ಅಂದರ್‌ – ಬಾಹರ್‌ ಎಂಬ ಹೆಸರಿನ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದು ಪಿಎಸ್ಐ ಯವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಓಡಲೆತ್ನಿಸಿದ ಆರೋಪಿಗಳಾದ 1] ರವಿ ಈರಬಸಪ್ಪ ಅಂಗಡಿ, 2] ಶರೀಫ್‌ ಸಾಬಣ್ಣ ನದಾಫ್‌, 3] ಮಂಜುನಾಥ, 4] ಮಹಾಂತೇಶ 5] ಬಾಲಪ್ಪ ಎಂಬವರುಗಳನ್ನು ಬಂಧಿಸಿ ವಶಕ್ಕೆ ಪಡೆದು ಪ್ರತಿಯೊಬ್ಬ ಆರೋಪಿಗಳಿಂದ ಜುಗಾರಿ ಆಟಕ್ಕೆ ಬಳಸಿದ ಒಟ್ಟು ನಗದು ರೂ. 3390/- ಹಣ , ಇಸ್ಪೀಟ್‌ ಎಲೆಗಳು -52 ಮತ್ತು ಕೇಸರಿ ಶಾಲು -1 ಇವುಗಳನ್ನು ವಶಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ   ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!