Spread the love

ಗಂಗೊಳ್ಳಿ: ದಿನಾಂಕ 14/02/2025 (ಹಾಯ್ ಉಡುಪಿ ನ್ಯೂಸ್) ಮುಳ್ಳಿಕಟ್ಟೆಯಿಂದ ತ್ರಾಸಿ ಕಡೆಗೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ನಡೆಸುತ್ತಿದ್ದ ಮಿನಿ ಟಿಪ್ಪರ್ ಲಾರಿಯನ್ನು ಗಂಗೊಳ್ಳಿ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಬಸವರಾಜ ಕನಶೆಟ್ಟಿ ಅವರು ವಶಪಡಿಸಿಕೊಂಡಿದ್ದಾರೆ.

ಗಂಗೊಳ್ಳಿ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಬಸವರಾಜ ಕನಶೆಟ್ಟಿ ರವರು ದಿನಾಂಕ :14-02-2025 ರಂದು ಠಾಣೆಯಲ್ಲಿರುವಾಗ ಬೆಳಿಗ್ಗೆ   KA20AC1102 ಈಚರ್‌ ವಾಹನದಲ್ಲಿ ಅಕ್ರಮವಾಗಿ ಕೆಂಪು ಕಲ್ಲುಗಳನ್ನುತುಂಬಿಸಿಕೊಂಡು ಮುಳ್ಳಿಕಟ್ಟೆಯಿಂದ ತ್ರಾಸಿ ಕಡೆಗೆ ಬರುತ್ತೀರುವುದಾಗಿ ಗುಪ್ತ ಮಾಹಿತಿ ಬಂದಂತೆ ಪಿಎಸ್ಐ ಯವರು  ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 09:50 ಗಂಟೆಗೆ ಮೊವಾಡಿ ಡಾನ್‌ ಬಾಸ್ಕೋ ಶಾಲೆಯ ಕ್ರಾಸ್‌ ಎದುರು truck Lay-By ಕಟ್ಟಡದ ಬಳಿ ಮುಳ್ಳಿಕಟ್ಟೆ ಕಡೆಯಿಂದ ಬರುತ್ತಿದ್ದ ಇಚರ್‌ ಮಿನಿ ಟಿಪ್ಪರ್‌ ಲಾರಿ ನಂಬ್ರ KA20AC1102 ನ್ನು ನಿಲ್ಲಿಸಿ, ಲಾರಿಯನ್ನು ಪರಿಶೀಲಿಸಿದ್ದಾರೆ .

ಲಾರಿಯಲ್ಲಿ ಕೆಂಪು ಕಲ್ಲುಗಳು ಲೋಡ್‌ ಮಾಡಿರುವುದು ಕಂಡುಬಂದಿದ್ದು ಲಾರಿಯಲ್ಲಿ ಚಾಲಕ ಸಂತೋಷ ಹಾಗೂ ಲೋಡರ್ಸ್‌ ಗಳಾದ ಶೇಖರ್‌ ನಾರ್ಕಳಿ ಮತ್ತು ಶಿವಾನಂದ ರವರು ಇದ್ದು , ಲಾರಿ ಚಾಲಕನಲ್ಲಿ ಕೆಂಪು ಕಲ್ಲಿನ ಬಗ್ಗೆ ಪರವಾನಿಗೆ ವಿಚಾರಿಸಿದಾಗ ಲಾರಿ ಮಾಲಿಕ ಮಣಿಕಂಠ ನು ತಿಳಿಸಿದಂತೆ ಆಲೂರು ಗ್ರಾಮದ ಗೋಳಿಕಟ್ಟೆಯ ಕಪಿಲ ಎಂಬವರ ಜಾಗದಿಂದ ಕೆಲಸಗಾರರ ಮೂಲಕ ಕೆಂಪು ಕಲ್ಲು ತುಂಬಿಸಿಕೊಂಡು ಬಂದಿದ್ದು ಇದಕ್ಕೆ ಯಾವುದೇ ಪರವಾನಿಗೆ ಹೊಂದಿಲ್ಲವಾಗಿ ತಿಳಿಸಿರುತ್ತಾನೆ ಎಂದು ದೂರಿದ್ದಾರೆ. ಆಪಾದಿತರುಗಳು ಒಟ್ಟಾಗಿ ಯಾವುದೇ ಪರವಾನಿಗೆ ಇಲ್ಲದೆ ಕಳವು ಮಾಡಿ ಪರವಾನಿಗೆ ಇಲ್ಲದೆ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2),112 BNS ಹಾಗೂ ಕಲಂ 4, 4(1A), 21 MMDR (MINES AND MINERALS REGULATION OF DEVELOPMENT) ACT 1957 ರಂತೆ ಪ್ರಕರಣ ದಾಖಲಾಗಿದೆ.

error: No Copying!