Spread the love

ಉಡುಪಿ: ದಿನಾಂಕ:14-02-2025( ಹಾಯ್ ಉಡುಪಿ ನ್ಯೂಸ್)  ಎಂ.ಜಿ.ಎಮ್ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಯುವಕನನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಹೇಮಂತ್‌ ಕುಮಾರ ಪಿಸಿ ಅವರು ಶಿವಕುಮಾರ ಪಿಸಿ ರವರೊಂದಿಗೆ ದಿನಾಂಕ 12/02/2025 ರಂದು ಅಪರಾಧ ಪತ್ತೆ ಕರ್ತವ್ಯದಲ್ಲಿ ಇರುವಾಗ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ  ಉಡುಪಿ ತಾಲೂಕು MGM ಕಾಲೇಜ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಸಂಜೆ ಸಮಯ ಒಬ್ಬ ಯುವಕನು ಗಾಂಜಾ ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿ ಅಮಲಿನಲ್ಲಿರುವುದಾಗಿ ಖಚಿತ ಮಾಹಿತಿ ದೊರತಂತೆ ಪೊಲೀಸರು MGM ಕಾಲೇಜ್‌ ಬಳಿ ತಲುಪಿ ಆತನನ್ನು ಪೊಲೀಸರು ಸುತ್ತುವರಿದು ಹೆಸರು , ವಿಳಾಸ ವಿಚಾರಣೆ ನಡೆಸಿದಾಗ ತನ್ನಹೆಸರು ಮ್ಯಾಥೂಸ್‌ M J ಎಂಬುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.

ಆತನನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು  ಮ್ಯಾಥ್ಯೂಸ್ MJನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯರು ವರದಿ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 27(ಬಿ) NDPS ACT ರಂತೆ ಪ್ರಕರಣ ದಾಖಲಾಗಿದೆ.

error: No Copying!