
- ಕಾರ್ಕಳ: ದಿನಾಂಕ 14/02/2025(ಹಾಯ್ ಉಡುಪಿ ನ್ಯೂಸ್) ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆ ಆಡಲು ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಕಾರ್ಕಳ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ ನಾರಾವಿ ಮೀಸಲು ಅರಣ್ಯದ ಒಳಗಡೆ ಹಾದುಹೋಗುವ ಪೂಂಜಾಜೆ –ಮಾಪಲ ಕಡೆ ಸಾಗುವ ಕಚ್ಛಾ ರಸ್ತೆಯಲ್ಲಿ ಕಾರ್ಕಳ ತಾಲೂಕು ನೂರಾಲ್‌ಬೆಟ್ಟು ಗ್ರಾಮದ ಮುಳಿಕಾರಪ್ಪ ಎಂಬಲ್ಲಿ ದಿನಾಂಕ:07-02-2025 ರಂದು ಅಪಾದಿತನಾದ ಪ್ರಶಾಂತ (41) ಎಂಬಾತನು ಮಾರುತಿ ಸ್ವಿಫ್ಟ್ ಡಿಸೈರ್ ನೋಂದಣಿ ಸಂಖ್ಯೆ KA-20 Z-8230 ರಲ್ಲಿ ಲೋಡ್ ಮಾಡಿದ ಒಂಟಿ ನಳಿಕೆ ತೋಟೆ ಕೋವಿ -1, ಕಾಡತೂಸು -21, ದೊಡ್ಡ ಗಾತ್ರದ ಕಬ್ಬಿಣದ ಬಾಲ್ -1, ಕಪ್ಪು ಬಣ್ಣದ ಬಟ್ಟೆಚೀಲ-1, ತಿಳಿ ಬಿಳಿ ಬಣ್ಣದ ಪ್ಲಾಸ್ಟಿಕ್ ಕವರ್ , ಪಡಿತರ ಚೀಟಿ -1 ಒಪ್ಪೋ ಕಂಪೆನಿಯ ಮೊಬೈಲ್ ಫೋನ್ -1 ರೇಷನ್ ಕಾರ್ಡ್ -1 ಮತ್ತು ಕಪ್ಪು ಬಣ್ಣದ ಹೆಡ್ ಲೈಟ್ 1 ನ್ನು ಕಾರಿನಲ್ಲಿ ಇಟ್ಟುಕೊಂಡಿದ್ದು ಇನ್ನೋರ್ವ ಆಪಾದಿತನಾದ ಅಶೋಕ (38) ಎಂಬವನು ಅಟೋ ರಿಕ್ಷಾ KA-20 D-5864 ರಲ್ಲಿ ಒಪ್ಪೋ ಕಂಪೆನಿಯ ಮೊಬೈಲ್ ಫೋನ್ -1 ನ್ನು ಹಿಡಿದು ಕೊಂಡು ಅಕ್ರಮ ಬೇಟೆ ಮಾಡುವ ಉದ್ದೇಶದಿಂದ ಅರಣ್ಯ ದೊಳಗೆ ಆಗಮಿಸಿದವರನ್ನು ವಲಯ ಅರಣ್ಯಾಧಿಕಾರಿ, ಕಾರ್ಕಳ ವನ್ಯಜೀವಿ ವಲಯ ಇವರು ಹಾಗೂ ಸಿಬ್ಬಂಧಿಯವರು ಪತ್ತೆ ಮಾಡಿ ಅಪಾದಿತರು ಈರ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿ, ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
- ಅಪಾದಿತ ಈರ್ವರನ್ನು ಮಾನ್ಯ ಎಸಿಜೆ ಮತ್ತು ಜೆಎಂಎಫ್‌ಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.
- ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 7 & 25 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.