
ಕುಂದಾಪುರ: ದಿನಾಂಕ:15-02-2025 (ಹಾಯ್ ಉಡುಪಿ ನ್ಯೂಸ್) ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ ಕೋಟೇಶ್ವರದ ಸಂಸ್ಥೆಯ ಮುಖ್ಯಸ್ಥ ರು ತನಗೆ ವಂಚನೆ ನಡೆಸಿದ್ದಾರೆ ಎಂದು ಗ್ರಾಹಕರೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಫುರ ತಾಲೂಕು, ವಕ್ವಾಡಿ ಗ್ರಾಮದ ನಿವಾಸಿ ಸುಜಯ (48) ಎಂಬವರು ಕೋಟೇಶ್ವರ ಗ್ರಾಮದ ಕೋಟೇಶ್ವರ ಪೇಟೆಯಲ್ಲಿರುವ ಕುಂದಾಪುರ ಸೌಹಾರ್ಧ ಕ್ರೆಡಿಕ್ ಕೋ ಆಪರೇಟಿವ್ ಲಿ ಕೋಟೇಶ್ವರ ಶಾಖೆಯಲ್ಲಿ ದಿನಾಂಕ 03/06/2019 ರಂದು ಸುಜಯರವರ ವಕ್ವಾಡಿ ಗ್ರಾಮದ ಸರ್ವೇ ನಂಬರ 86/15 ರಲ್ಲಿ 10 ಸೆಂಟ್ಸ್ ಜಾಗದ ಮತ್ತು ಕುಂಬಾಶಿ ಗ್ರಾಮದ ಸರ್ವೇ ನಂಬರ 283/05 ರಲ್ಲಿ 5.5 ಸೆಂಟ್ಸ್ ಜಾಗವನ್ನು ಮಾರ್ಗೇಜ್ ಮಾಡಿ, ಈ ಸೊಸೈಟಿಯ ಮುಖ್ಯಸ್ಥರಾದ, ಆರೋಪಿಗಳಾದ ಶಿವಾನಂದ ಮತ್ತು ರಾಜು ಎಂಬವರ ಸಮ್ಮುಖದಲ್ಲಿ 20 ಲಕ್ಷ ಸಾಲವನ್ನು ಪಡೆದುಕೊಂಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಾಲವನ್ನು ಸುಜಯರವರು ಹಂತ ಹಂತವಾಗಿ ಆನ್ ಲೈನ್ ಹಾಗೂ ನಗದಾಗಿ ಬಡ್ಡಿ ಸಮೇತ ಪಾವತಿ ಮಾಡಿದ್ದು, 2020 ನೇ ನವೆಂಬರ ತಿಂಗಳಲ್ಲಿ ಆರೋಪಿ ಶಿವಾನಂದ ಮತ್ತು ರಾಜುರವರು ಸಾಲ ಚುಕ್ತಾ ರಶೀದಿ ನೀಡಿ ಸುಜಯರವರ ಕುಂಬಾಶಿ ಗ್ರಾಮದ 5.5 ಸೆಂಟ್ಸ್ ಜಾಗದ ಮೂಲ ದಾಖಲೆಗಳನ್ನು ಮಾತ್ರ ವಾಪಾಸ್ಸು ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ವಕ್ವಾಡಿ ಗ್ರಾಮದ 10 ಸೆಂಟ್ಸ್ ಜಾಗದ ಮೂಲ ದಾಖಲೆಗಳು ಮುಖ್ಯ ಕಛೇರಿಯಲ್ಲಿದೆ, ತಂದು ಕೋಡುತ್ತೇವೆ ಎಂದು ಹೇಳಿದ್ದು ನಂತರ ಆರೋಪಿಗಳಾದ ಶಿವಾನಂದ ಮತ್ತು ರಾಜು ರವರು ಜಾಗದ ದಾಖಲಾತಿಗಳನ್ನು ಕೊಡಬೇಕಾದರೆ ಹೆಚ್ಚಿಗೆ 10 ಲಕ್ಷ ಹಣವನ್ನು ನೀಡಬೇಕೆಂದು ಬೇಡಿಕೆ ಇಟ್ಟು, ಆ ಹಣವನ್ನು ಕೊಡದಿದ್ದಲ್ಲಿ ನಿನ್ನನ್ನು ಬೀಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿದ್ದಾರೆ.
ನಂತರ ಈ ಸಂಸ್ಥೆಯಲ್ಲಿ ರಾಜು ರವರ ಸ್ಥಾನಕ್ಕೆ ಆರೋಪಿ 3ನೇಯವನಾದ ರಾಘವೇಂದ್ರ ಎಂಬವನು ಬಂದಿದ್ದು, ಅವರಲ್ಲಿ ಸುಜಯರವರು ವಕ್ವಾಡಿ ಗ್ರಾಮದ 10 ಸೆಂಟ್ಸ್ ಜಾಗದ ಮೂಲ ದಾಖಲೆಗಳನ್ನು ಕೋಡುವಂತೆ ಕೇಳಿದ್ದು ಆ ಸಮಯ ಆರೋಪಿ ಶಿವಾನಂದ ಮತ್ತು ರಾಘವೇಂದ್ರರವರು 10 ಲಕ್ಷ ಹಣವನ್ನು ನೀನು ಹೆಚ್ಚಿಗೆ ಕಟ್ಟಬೇಕು ಇಲ್ಲದಿದ್ದಲ್ಲಿ ನಿನಗೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದಕ್ಕೆ ಸುಜಯರವರು ದಿನಾಂಕ 01/12/2023 ರಂದು 4 ಲಕ್ಷ ಮತ್ತು ದಿನಾಂಕ 13/12/2023 ರಂದು 4 ಲಕ್ಷ 67 ಸಾವಿರ ಒಟ್ಟು 8,67,000/- ಹಣವನ್ನು ಹೆಚ್ಚಿಗೆ ಕಟ್ಟಿದರೂ ಆರೋಪಿಗಳು ಒಳಸಂಚು ರೂಪಿಸಿ ಸುಜಯರವರಿಗೆ ಮೂಲ ದಾಖಲಾತಿಗಳನ್ನು ವಾಪಾಸ್ಸು ನೀಡದೇ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 420, 384, 504, 506, 120(B) ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿದೆ.