
ಕುಂದಾಪುರ: ದಿನಾಂಕ:15-02-2025(ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ನಿವಾಸಿ ಮಹಿಳೆಯೋರ್ವರೀಗೆ ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕುಂದಾಪುರ ,ಕಸಬಾ ಗ್ರಾಮದ ನಿವಾಸಿ ಮೇಘನ (29) ಎಂಬವರ ಗಂಡ ಪ್ರಸನ್ನ ಎಂಬವನಾಗಿದ್ದು, 2ನೇ ಆರೋಪಿ ಮಹಾದೇವ ಮಾವ ಹಾಗೂ 3ನೇ ಆರೋಪಿ ಲಲಿತಾ ಅತ್ತೆ ಮತ್ತು 4 ನೇ ಆರೋಪಿ ಪ್ರಮೀಳಾ ಅತ್ತಿಗೆಯಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೇಘನ ಅವರು ತಿಳಿಸಿದ್ದಾರೆ.
ಮೇಘನಾರವರಿಗೆ ದಿನಾಂಕ 10/11/2024 ರಂದು 1ನೇ ಆರೋಪಿ ಪ್ರಸನ್ನನೊಂದಿಗೆ ಮದುವೆಯಾಗಿದ್ದು. ಮದುವೆ ಪೂರ್ವದಲ್ಲಿ ನಿಶ್ಚಿತಾರ್ಥದ ಸಮಯ ಆರೋಪಿ ಗಂಡನ ಕಡೆಯವರು ವರದಕ್ಷಿಣೆಯಾಗಿ ಹಣ ಮತ್ತು ಚಿನ್ನಾಭರಣವನ್ನು ನೀಡುವಂತೆ ಒತ್ತಾಯಿಸಿರುವುದರಿಂದ ಈ ಸಂಬಂದ ಮುರಿದು ಹೋಗಬಾರದೆಂದು ಮೇಘನಾರವರ ತಂದೆಯು ವರದಕ್ಷಿಣೆಯಾಗಿ 20 ಲಕ್ಷ ರೂಪಾಯಿ ಹಣ ಹಾಗೂ 12 ಪವನ್ ಚಿನ್ನಾಭರಣವನ್ನು ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ನಂತರ ಮೇಘನಾ ರನ್ನು ಕುಂದಾಪುರ ತಾಲೂಕು ಕಂದಾವರ ಉಳ್ಳೂರಿನಲ್ಲಿರುವ 1ನೇ ಆರೋಪಿ ಗಂಡ ಪ್ರಸನ್ನ ನ ಸೋದರ ಮಾವನ ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಸುಮಾರು 7 ದಿನಗಳ ಕಾಲ ವಾಸ್ತವ್ಯ ಇದ್ದು ಆ ಸಮಯ ಗಂಡ ಪ್ರಸನ್ನನು ಮೇಘನಾರೊಂದಿಗೆ ಅನುಚಿತವಾಗಿ ವರ್ತಿಸಿರುತ್ತಾನೆ ಎಂದು ದೂರಿದ್ದಾರೆ. ನಂತರ ಆರೋಪಿಗಳು ಮೇಘನಾರನ್ನು ಬೆಂಗಳೂರಿನ ಜೀವನಹಳ್ಳಿಯಲ್ಲಿರುವ ಅವರ ಮನೆಗೆ ಕರೆದುಕೊಂಡುಹೋಗಿ ವಾಸ್ತವ್ಯ ಇದ್ದರು ಎಂದಿದ್ದಾರೆ.
ಆ ಸಮಯದಲ್ಲಿ ಆರೋಪಿ ಗಂಡನು ಮೇಘನಾ ರವರೊಂದಿಗೆ ಅನುಮಾನ ಬರುವಂತೆ ವರ್ತಿಸಿರುತ್ತಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಸಮಂಜಸ ಉತ್ತರ ನೀಡದೇ ಇದ್ದು, 1ರಿಂದ 4 ನೇ ಆರೋಪಿತರು ಪಿರ್ಯಾದಿದಾರರು ಮದುವೆ ಆಗಿ ಮನೆಗೆ ಕಾಲಿಟ್ಟ ನಂತರ ಎಲ್ಲಾ ರೀತಿಯ ಸಮಸ್ಯೆ ಆಗಿರುವುದು ಎಂದು ದೂಷಿಸಿ ಮಾನಸಿಕ ಕಿರುಕುಳ ನೀಡಿರುತ್ತಾರೆ ಎಂದಿದ್ದಾರೆ . ನಂತರ ದಿನಾಂಕ: 24/11/2024 ರಂದು ಮನೆಯಲ್ಲಿ ಇರುವ ದೇವರ ಕಾರ್ಯಕ್ರಮಕ್ಕೆ ಮೇಘನಾ ರವರ ತಂದೆ-ತಾಯಿ ಬಂದಿದ್ದು ಆ ದಿನ ಗಂಡ ಪ್ರಸನ್ನ ನ ಅನುಚಿತ ವರ್ತನೆಯ ಬಗ್ಗೆ ಅವರು ಕೇಳಿದಾಗ ಮೇಘನಾ ರವರ ತಂದೆ-ತಾಯಿಗೆ ಅವಾಚ್ಯವಾಗಿ ಬೈದು, ಕಾಲಿನಿಂದ ತುಳಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ 1ನೇ ಆರೋಪಿ ಗಂಡನನ್ನು ಮೇಘನಾ ರವರು ಕುಂದಾಪುರ ತಾಲೂಕು ಕಸಬಾ ಗ್ರಾಮದಲ್ಲಿರುವ ತನ್ನ ತವರು ಮನೆಗೆ ಕರೆದುಕೊಂಡು ಬಂದಿದ್ದು ಆ ಸಮಯದಲ್ಲಿ ಆರೋಪಿ ಗಂಡನು ಮೇಘನಾ ರೊಂದಿಗೆ ಅಸಹಜ ವರ್ತನೆ ಮಾಡಿದ್ದು ಅದನ್ನು ಪ್ರಶ್ನಿಸಿದಾಗ ಅವಾಚ್ಯವಾಗಿ ಬೈದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾನೆ ಎಂದಿದ್ದಾರೆ. ನಂತರ ಆರೋಪಿ ಗಂಡನು ಮೇಘನಾ ರವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ಆ ಸಮಯ ಗಂಡ ಪ್ರಸನ್ನ ನು ಹಿಂದೆ ಪ್ರೀತಿಸಿದ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದರಿಂದ ಮೇಘನಾ ರವರಿಗೆ ಮನಸ್ಸಿಗೆ ನೋವುಂಟಾಗಿ ತವರು ಮನೆಗೆ ಬಂದಿರುತ್ತಾರೆ ಎಂದು ತಿಳಿಸಿದ್ದಾರೆ.
ನಂತರ ಗಂಡ ಪ್ರಸನ್ನ, ಮಾವ ಮಹಾದೇವ ,ಆತ್ತೆ ಲಲಿತ ಈ ಮೂವರು ಆರೋಪಿತರು ಮೇಘನಾರವರ ತವರು ಮನೆಗೆ ಮಾತುಕತೆ ಮಾಡುವ ಬಗ್ಗೆ ಬಂದು ಇವರ ಜೀವನ ಸರಿಪಡಿಸುವ ಬಗ್ಗೆ ಇನ್ನು 5 ಲಕ್ಷ ವರದಕ್ಷಿಣೆ ನೀಡಬೇಕೆಂದು ಕೇಳಿರುತ್ತಾರೆ ಅಲ್ಲದೆ ನಂತರವು ಕೂಡ ಆರೋಪಿ ಗಂಡನು ಮೇಘನಾ ರವರ ತವರು ಮನೆಗೆ ಬಂದು ಹಲ್ಲೆ ಮಾಡಿರುತ್ತಾನೆ ಎಂದು ದೂರಿದ್ದಾರೆ.
ಗಂಡ ಪ್ರಸನ್ನ ಮತ್ತು ಇತರ ಮೂವರು ಆರೋಪಿಗಳು ಸಮಾನ ಉದ್ದೇಶದಿಂದ ಹೆಚ್ಚುವರಿ ವರದಕ್ಷಿಣೆ ಪಡೆಯಲು ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮೇಘನಾ ಅವರು ಪೋಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352, 351(2) R/W 3(5) BNS & 3, 4 DP ACT ರಂತೆ ಪ್ರಕರಣ ದಾಖಲಾಗಿರುತ್ತದೆ.