Spread the love

ಶಂಕರನಾರಾಯಣ: ದಿನಾಂಕ:25-01-2025(ಹಾಯ್ ಉಡುಪಿ ನ್ಯೂಸ್) ಆಸ್ತಿ ವಿಚಾರದಲ್ಲಿ ಅಣ್ಣ ಹಾಗೂ ಅಣ್ಣನ ಮಕ್ಕಳು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕ್ರಿಷ್ಣ ಮೂರ್ತಿ ಡಿ ಎಂಬವರು ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕುಂದಾಪುರ,ಶಂಕರನಾರಾಯಣ ಗ್ರಾಮದ ನಿವಾಸಿ ಕ್ರಿಷ್ಣ ಮೂರ್ತಿ ಡಿ ಎಂಬವರು ಶಂಕರನಾರಾಯಣದಲ್ಲಿ ಸುಮಾರು 35 ವರ್ಷದಿಂದ ಲಕ್ಷ್ಮೀ ಜ್ಯುವೆಲರಿ ಅಂಗಡಿ ನಡೆಸಿಕೊಂಡು ಬಂದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕ್ರಿಷ್ಣಮೂರ್ತಿ ಡಿ ಯವರಿಗೂ ಹಾಗೂ ಅವರ ಅಣ್ಣನಾದ ಮಂಜುನಾಥ ಎಂಬವರಿಗೂ ಆಸ್ತಿಯ ವಿಚಾರಕ್ಕೆ ತಕರಾರಿದ್ದು ದಿನಾಂಕ 14/01/2025 ರಂದು ಮಧ್ಯಾಹ್ನ  ಕ್ರಿಷ್ಣ ಮೂರ್ತಿ ಡಿ ಯವರು ಹಾಗೂ ಅವರ ಅಳಿಯನಾದ ಪ್ರೀತಮ್ ಪಿ ವರ್ಣೇಕರ್ ಎಂಬವರು ಊಟಕ್ಕೆ ಹೋಗಲು ಅಂಗಡಿ ಬಾಗಿಲು ಹಾಕಿ ಹೊರಗೆ ಹೋಗಲು ನಿಂತುಕೊಂಡಿರುವಾಗ ಮಂಜುನಾಥ , ಅವರ ಮಕ್ಕಳಾದ ಮನೋಜ ಹಾಗೂ ವಿರಾಜ ಅವರು ಕ್ರಿಷ್ಣ ಮೂರ್ತಿಯವರ ಅಂಗಡಿಯ ವರಾಂಡಕ್ಕೆ ಅಕ್ರಮ ಪ್ರವೇಶ ಮಾಡಿ ಕ್ರಿಷ್ಣಮೂರ್ತಿಯವರನ್ನು ಹಾಗೂ ಪ್ರೀತಮ್ ಪಿ ವರ್ಣೇಕರ್ ಅವರನ್ನು ಹಿಡಿದು ಎಳೆದು ಮನೋಜ ಅವರು ಪ್ರೀತಮ್ ಅವರ ಕುತ್ತಿಗೆಗೆ ಕೈ ಹಾಕಿ (ಚಿನ್ನದ) ಚೈನ್ ಎಳೆದು ಬಿಸಾಡಿ, ಬೆನ್ನಿಗೆ ಹೊಡೆದು,ಗುದ್ದಿ ಉಗುರಿನಿಂದ ಪರಚಿ, ನೆಲಕ್ಕೆ ಮಲಗಿಸಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಶರ್ಟ್ ಹರಿದಿದ್ದು, ಮಂಜುನಾಥ ಅವರು ಕೈ ಯಿಂದ ಹೊಡೆದಿದ್ದು, ವಿರಾಜ ನು ಎಲ್ಲಾ ಇವನಿಂದಲೇ ಆಗುವುದು ಇವನನ್ನು ಕೊಂದು ತೆಗೆದರೆ ಇವನ ಆಸ್ತಿ ನಮಗೆ ಸಿಗುತ್ತದೆ ಎಂದು ಹೇಳಿ ಕ್ರಿಷ್ಣ ಮೂರ್ತಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಹಿಸುಕಿ ಉಸಿರುಕಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಆಗ ಕ್ರಿಷ್ಣಮೂರ್ತಿಯವರು ಬಿಡಿಸಿಕೊಂಡಿದ್ದು, ಮಂಜುನಾಥ ಅವರು ಕ್ರಿಷ್ಣಮೂರ್ತಿಯವರನ್ನು ಹಿಡಿದು ಅವರ ಅಳಿಯನಿಗೆ ಹೊಡೆಯಲು ಅವರ ಮಕ್ಕಳಿಗೆ ಪ್ರಚೋದಿಸಿದ್ದು, ಇದರಿಂದ ಕ್ರಿಷ್ಣ ಮೂರ್ತಿಯವರ ಕನ್ನಡಕ ಒಡೆದಿದ್ದು ಆಗ ಮಂಜುನಾಥ ಅವರ ಹೆಂಡತಿ ವೀಣಾ ಅವರು ಬಂದು ನೀವು ಇವರನ್ನು ಬಿಡಬಾರದಿತ್ತು ಇವರನ್ನು ಕೊಲ್ಲಬೇಕು ಎಂದು ಅವಾಚ್ಯವಾಗಿ ಬೈದು ನೀನು ಊರು ಬಿಟ್ಟು ಹೋಗಬೇಕು ಇಲ್ಲದಿದ್ದರೆ ನಿನ್ನ ಅಂಗಡಿಯನ್ನು ಸುಟ್ಟು ಬಿಡುತ್ತೇನೆ ಎಂದು ಹೆದರಿಸಿದ್ದು, ಮನೋಜ ಅವರು ಕ್ರಿಷ್ಣ ಮೂರ್ತಿಯವರ ಹೆಂಡತಿ ಹಾಗೂ ಅವರ ಅಳಿಯ ಪ್ರೀತಮ್ ಅವರಿಗೆ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ಎದೆಗೆ ಜೋರಾಗಿ ಗುದ್ದಿ ಶರ್ಟ್ ಅನ್ನು ಹರಿದಿದ್ದು, ಕ್ರಿಷ್ಣ ಮೂರ್ತಿಯವರು ಬೊಬ್ಬೆ ಹಾಕಿದಾಗ ಅಲ್ಲೆ ಇದ್ದ ಪಕ್ಕದವರು ಕ್ರಿಷ್ಣ ಮೂರ್ತಿಯವರನ್ನು ಹಾಗೂ ಪ್ರೀತಮ್ ಪಿ ವರ್ಣೇಕರ್ ಅವರನ್ನು ಉಪಚರಿಸಿ ಶಂಕರನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ಅಲ್ಲಿ ಕುಂದಾಪುರ ಸರ್ಕಾರಿ ಆಸ್ಪ್ರತ್ರೆಗೆ ಹೋಗಿದ್ದು ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದಾರೆ . ಕ್ರಿಷ್ಣ ಮೂರ್ತಿ ಡಿ ಯವರು  ಆಸ್ಪತ್ರೆಯಿಂದ ಬಿಡುಗಡೆಗೊಂಡು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕಲಂ: 329(3), 115(2),109, 324(3), 352, 351(3) r/w 3(5) BNSರಂತೆ ಪ್ರಕರಣ ದಾಖಲಾಗಿದೆ.

error: No Copying!