Spread the love

ಉಡುಪಿ: ದಿನಾಂಕ:24-01-2025(ಹಾಯ್ ಉಡುಪಿ ನ್ಯೂಸ್) ನಗರದ ಪಿ.ಪಿ.ಸಿ.ಕಾಲೇಜು ಬಳಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಉತ್ತರ ಕರ್ನಾಟಕ ಮೂಲದ ದಂಪತಿಗಳ ಸುಮಾರು ಐದು ವರ್ಷ ಪ್ರಾಯದ ಹೆಣ್ಣು ಮಗುವನ್ನು ಯಾರೋ ಓರ್ವ ಖಾಕಿ ಬಣ್ಣಕ್ಕೆ ಹೋಲುವಂತಹ ನಸು ಬಣ್ಣದ ವಸ್ತ್ರ ಧರಿಸಿದ ವ್ಯಕ್ತಿ ಪುಸಲಾಯಿಸಿ ಸನಿಹದಲ್ಲಿರುವ ಓಣಿಯೊಂದರಲ್ಲಿರುವ ಪೊದೆಗಳೆಡೆಗೆ ಕರೆದೊಯ್ದು ಅತ್ಯಾಚಾರಕ್ಕೆ ಪ್ರಯತ್ನಿಸಿ ಕೊನೆಗೆ ಬಾವಿಗೆ ಎಸೆಯುವ ಯತ್ನ ನಡೆಸಿದ್ದಾನೆ ಎನ್ನಲಾಗಿದೆ.

ಮಗುವಿನ ಕೂಗನ್ನು ಕೇಳಿ ಮಹಿಳೆಯೋರ್ವರು ನೋಡಲು ಹೋದಾಗ ಆರೋಪಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮುಖ ಹಾಗೂ ದೇಹದ ಭಾಗಗಳಲ್ಲಿ ಗಾಯಗೊಂಡಿರುವ ಮಗುವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎನ್ನಲಾಗಿದೆ. ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿಯ ಶೋಧ ಕಾರ್ಯ ಮುಂದುವರಿಸಿದ್ದಾರೆ ಎನ್ನಲಾಗಿದೆ.

error: No Copying!