Spread the love

ಉಡುಪಿ: ದಿನಾಂಕ :18-01-2025 (ಹಾಯ್ ಉಡುಪಿ ನ್ಯೂಸ್) ಆಟೋರಿಕ್ಷಾ ಚಾಲಕರೀರ್ವರು ರಿಕ್ಷಾ ನಿಲ್ದಾಣ ದೊಳಗೆ ಬರದಂತೆ ತಡೆದು ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಿಕ್ಷಾ ಚಾಲಕರೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ,ಪುತ್ತೂರು ಗ್ರಾಮದ ನಿವಾಸಿ ಮಂಜುನಾಥ (43) ಎಂಬವರು ಉಡುಪಿ ತಾಲ್ಲೂಕು ,ಮೂಡನಿಡಂಬೂರು ಗ್ರಾಮದ ನಗರಸಭೆ ರಿಕ್ಷಾ ನಿಲ್ದಾಣದಲ್ಲಿ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿ ಕೊಂಡಿದ್ದಾರೆ.

ದಿನಾಂಕ:13/01/2025 ರಂದು ಸಂಜೆ 5 ಗಂಟೆಗೆ  ಸರ್ವಿಸ್‌ ಬಸ್‌ ನಿಲ್ದಾಣದ ಬಳಿ ಇರುವ  ಡಿ.ಡಿ.ಪಿ ಆಟೋ ನಿಲ್ದಾಣಕ್ಕೆ ರಿಕ್ಷಾ ಬಾಡಿಗೆಗೆ ಹೋದಾಗ ಅಲ್ಲಿಯ ಆಟೋರಿಕ್ಷಾ ನಂಬ್ರ KA 20 AB 0392 ನೇ ಚಾಲಕನಾದ ಮಹೇಶ್‌ ಮತ್ತು ಆಟೋರಿಕ್ಷಾ ನಂಬ್ರ KA 20 AC 1595  ನೇ ಚಾಲಕ ರಾಘು ಎಂಬವನು ಮಂಜುನಾಥ ರವರ ಆಟೋರಿಕ್ಷಾವನ್ನು ನಿಲ್ದಾಣದ ಒಳಗಡೆ ಪ್ರವೇಶಿಸುವುದನ್ನು ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 216(2),  351(2), 352 BNS  ರಂತೆ ಪ್ರಕರಣ ದಾಖಲಾಗಿದೆ.

error: No Copying!