
ಗಂಗೊಳ್ಳಿ: ದಿನಾಂಕ:17-01-2025 (ಹಾಯ್ ಉಡುಪಿ ನ್ಯೂಸ್) ಅಧಿಕ ಲಾಭಾಂಶದ ಆಸೆ ತೋರಿಸಿ ಮಹಿಳೆಯೋರ್ವರು 5.17 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಆಲೂರು ನಿವಾಸಿ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ .
ದಿನಾಂಕ 09/12/2024 ರಿಂದ ದಿನಾಂಕ 08/01/2025ರ ನಡುವೆ ಆರೋಪಿ ಮೀರಾ ಎಂಬಾಕೆ ಕುಂದಾಪುರ ತಾಲೂಕು ಆಲೂರು ನಿವಾಸಿ ಪ್ರದೀಪ (27) ಎಂಬವರ ಬ್ಯಾಂಕ್ ಖಾತೆ ಯಿಂದ ರೂಪಾಯಿ 5,17,000/- ನಗದನ್ನು ಅವರ 7 ಬೇರೆ ಬೇರೆ ಖಾತೆಗಳಿಗೆ ಜಮಾವಣೆ ಮಾಡಿಕೊಂಡು ಪ್ರದೀಪ ರವರು ರಚಿಸಿಕೊಂಡಿರುವ ಪ್ರೈವೇಟ್ ಇಕ್ವಿಟಿ ಅಕೌಂಟ್‌ನಲ್ಲಿ ಹೂಡಿಕೆ ಮಾಡಿಕೊಂಡು ಅಧಿಕ ಲಾಭಾಂಶ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ಪ್ರದೀಪರವರಿಗೆ ನಂಬಿಕೆ ದ್ರೋಹ ಮಾಡಿ ಪ್ರದೀಪರವರ ಅಸಲು ಮೊತ್ತ ಹಾಗೂ ಯಾವುದೇ ಲಾಭಾಂಶವನ್ನು ನೀಡದೇ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ: 318(2) and 318(4) BNS ಮತ್ತು ಕಲಂ 66(ಸಿ) ಮತ್ತು 66(ಡಿ) ಐ ಟಿ ಕಾಯ್ದೆ ರಂತೆ ಪ್ರಕರಣ ದಾಖಲಾಗಿದೆ.