Spread the love

ಕಾರ್ಕಳ: ದಿನಾಂಕ:15-01-2025 (ಹಾಯ್ ಉಡುಪಿ ನ್ಯೂಸ್) ಪ್ರಕರಣವೊಂದರಲ್ಲಿ ಬಂಧಿತನಾದ ಆರೋಪಿಯೋರ್ವ ಗಾಂಜಾ ಸೇವನೆ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ : 13/01/2025 ರಂದು ಪ್ರಕರಣವೊಂದರಲ್ಲಿ ಕಾರ್ಕಳ ನಗರ ಪೊಲೀಸರಿಂದ ಬಂಧಿಸಲ್ಪಟ್ಟ  ಆರೋಪಿ ಸೈಯದ್‌ ಸೈಫ್‌ (22) ಎಂಬಾತನನ್ನು  ಬಂಧನ ಮಾಡಿದ ಸಮಯ ಆತ ಯಾವುದೋ ಅಮಲು ಪದಾರ್ಥ ಸೇವಿಸಿದಂತೆ ವರ್ತನೆ ಮಾಡುತ್ತಿದ್ದು, ಈ ಸಮಯ ಪೊಲೀಸರು ಅನುಮಾನಗೊಂಡು ಸೈಯದ್ ಸೈಫ್ ನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಪರೀಕ್ಷೆ ನಡೆಸಿ ದೃಡಪತ್ರ ನೀಡುವಂತೆ  ದಿನಾಂಕ 14/01/2025 ರಂದು ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ  ಆತನನ್ನು ಹಾಜರುಪಡಿಸಿದ್ದರು ಎನ್ನಲಾಗಿದೆ .

ಈ ಬಗ್ಗೆ  ವೈದ್ಯಕೀಯ ವರದಿ ದಿನಾಂಕ :14-01-2025 ರಂದು ಬಂದಿದ್ದು, ಅದರಲ್ಲಿ ಸೈಯದ್‌ ಸೈಫ್‌ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ ಎನ್ನಲಾಗಿದೆ .

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿದೆ.

error: No Copying!