Spread the love

ಬ್ರಹ್ಮಾವರ: ದಿನಾಂಕ:14-01-2025(ಹಾಯ್ ಉಡುಪಿ ನ್ಯೂಸ್) ಜಾಗದ ಖಾತೆ ಬದಲಾವಣೆ ಮಾಡಿ ಕೊಡುವುದಾಗಿ ನಂಬಿಸಿ ಬೆಂಗಳೂರಿನ ಮಣಿ ಎಂಬವರು ವಂಚನೆ ನಡೆಸಿದ್ದಾರೆ ಎಂದು ಬ್ರಹ್ಮಾವರದ ನಿವಾಸಿ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ತಾಲೂಕು, ಕುಮ್ರಗೋಡು ಚಿಯಾರು ರಸ್ತೆ ಎಂಬಲ್ಲಿ ವಾಸವಾಗಿರುವ ಮೊಹಮ್ಮದ್‌ ಫಿರೋಜ್‌ (52) ಎಂಬವರು ಈ ಹಿಂದೆ ಬೆಂಗಳೂರಿನ ಬನ್ನೇರುಘಟ್ಟ ಎಂಬಲ್ಲಿ 2850 ಚದರ ಅಡಿ ವಿಸ್ತೀರ್ಣದ ಜಾಗವನ್ನು ಖರೀದಿಸಿ, ಅವರು ವಿದೇಶಕ್ಕೆ ಕೆಲಸಕ್ಕೆ ಹೋಗಬೇಕಾಗಿದ್ದ ಕಾರಣ ಜಾಗದ ಖಾತೆ ಬದಲಾವಣೆ ಬಗ್ಗೆ ತನ್ನ ಸ್ನೇಹಿತ ಅಬೂಬಕ್ಕರ್‌ ಎಂಬವರು ಪರಿಚಯಿಸಿದ ಆರೋಪಿ ಮಣಿ, ಬೆಂಗಳೂರು ಎಂಬವರಲ್ಲಿ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಣಿ ಬೆಂಗಳೂರು ಎಂಬವರು ಮೊಹಮ್ಮದ್ ಫಿರೋಜ್ ರವರಿಗೆ 15 ದಿವಸದೊಳಗೆ ಖಾತೆ ಬದಲಾವಣೆ ಮಾಡಿ ಕೊಡುವುದಾಗಿ ನಂಬಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮೊಹಮ್ಮದ್ ಫಿರೋಜ್ ಅವರು ಆರೋಪಿತನ ಮಾತನ್ನು ನಂಬಿ ದಿನಾಂಕ 11.12.2023 ರಿಂದ 22.12.2023 ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಆರೋಪಿ ತಿಳಿಸಿದ ಮೊಬೈಲ್‌ ನಂಬ್ರಕ್ಕೆ ಫೋನ್‌ ಪೇ ಮೂಲಕ ಒಟ್ಟು   2 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.. ನಂತರ ಆರೋಪಿ ಮಣಿ ಯು ಇದುವರೆಗೂ ಖಾತೆ ಬದಲಾವಣೆ ಮಾಡಿ ಕೊಡದೇ ಇದ್ದು, ಕರೆಯನ್ನು ಮಾಡಿದಾಗ ಕರೆಯನ್ನು ಸ್ವೀಕರಿಸಿರುವುದಿಲ್ಲ ಎಂದಿದ್ದಾರೆ .ಆರೋಪಿ ಮಣಿ ಯು ಮೊಹಮ್ಮದ್ ಫಿರೋಜ್ ರವರಿಗೆ ಮೋಸ ಮಾಡುವ ಉದ್ಧೇಶದಿಂದ ಮೊಹಮ್ಮದ್ ಫಿರೋಜ್ ರಿಂದ ಹಣ ಪಡೆದು ಖಾತೆ ಬದಲಾವಣೆ ಮಾಡದೇ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿ ಮೊಹಮ್ಮದ್ ಫಿರೋಜ್ ರಿಗೆ ಒಟ್ಟು 4 ಲಕ್ಷ ದಷ್ಟು ಹಣ ನಷ್ಟವುಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿದೆ..

error: No Copying!