Spread the love

ಬ್ರಹ್ಮಾವರ: ದಿನಾಂಕ :07-01-2025 (ಹಾಯ್ ಉಡುಪಿ ನ್ಯೂಸ್) ಸಾಯಿಬ್ರ ಕಟ್ಟೆಯಲ್ಲಿ ನಡೆದ ಸಮಾವೇಶ ವೊಂದಕ್ಕೆ ಶಾಮಿಯಾನ ಮಾಲಕರೋರ್ವರು ಹಾಕಿದ್ದ ಜನರೇಟರ್ ಒಂದನ್ನು ಯಾರೋ ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

  • ಸಾಯಿಬ್ರಕಟ್ಟೆ, ಯಡ್ತಾಡಿ ಗ್ರಾಮದ ನಿವಾಸಿ ಅಪ್ಪು (47) ಎಂಬವರು ಹನಿ ಶಾಮಿಯಾನ ಹಾಗೂ ಲೈಟಿಂಗ್‌ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ದಿನಾಂಕ 29-12–2024 ರಂದು ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆಯಲ್ಲಿರುವ ಮಹಾತ್ಮ ಗಾಂಧಿ ಪೌಢ ಶಾಲೆಯ ಮೈದಾನದಲ್ಲಿ ಗಾಣಿಗರ ಸಮಾವೇಶ ಕಾರ್ಯಕ್ರಮಕ್ಕಾಗಿ ಕಿರ್ಲೋಸ್ಕರ್‌ ಕಂಪೆನಿಯ ಜನರೇಟರನ್ನು ಇರಿಸಿದ್ದು ದಿನಾಂಕ 30-12-2024 ರಂದು ರಾತ್ರಿ 11:00 ಗಂಟೆ ವೇಳೆಗೆ ನೋಡಿದಾಗ ಜನರೇಟರ್‌ ಸ್ಥಳದಲ್ಲಿಯೇ ಇದ್ದು ದಿನಾಂಕ 31-12-2024 ರಂದು ಬೆಳಗ್ಗೆ 07:00 ಗಂಟೆಗೆ ನೋಡುವಾಗ ಜನರೇಟರ್‌ ಹಾಗೂ ಅದರ ಚಾನಲ್‌ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ವತ್ತಿನ ಮೌಲ್ಯ ಸುಮಾರು 3,00,000 ರೂಗಳಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  ಜನರೇಟರನ್ನು ಹುಡುಕಾಡಿ ದೂರು ನೀಡಲು ವಿಳಂಬವಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ   ಕಲಂ:303(2)BNS ರಂತೆ ಪ್ರಕರಣ ದಾಖಲಾಗಿದೆ.
error: No Copying!