Spread the love

ಕುಂದಾಪುರ: ದಿನಾಂಕ: 07-01-2025(ಹಾಯ್ ಉಡುಪಿ ನ್ಯೂಸ್) ಕೋಟೇಶ್ವರದ ಫೈನಾನ್ಸ್ ಸಂಸ್ಥೆ ಒಂದಕ್ಕೆ ಮೂವರು ನೌಕರರು ಒಟ್ಟು 20.5 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಗುರುಬಸವರಾಜ ಕೆ (36) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಭಾರತ್‌ ಫೈನಾನ್ಸಿಯಲ್‌ ಇನ್ ಕ್ಯೂಶನ್‌ ಲಿಮಿಟೆಡ್‌ ಶಾಖೆಯಲ್ಲಿ ಬಳ್ಳಾರಿ ಸೋಗಿ ಗ್ರಾಮದ ಗುರು ಬಸವರಾಜ ಕೆ (36) ಎಂಬವರು ಆರು ತಿಂಗಳಿನಿಂದ ಯೂನಿಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಸ್ಥೆಯಲ್ಲಿ ದಿನಾಂಕ: 01-04-2023 ರಿಂದ ದಿನಾಂಕ:30-06-2024ರ ಅವಧಿಯಲ್ಲಿ ಬ್ರಾಂಚ್‌ ಕ್ರೆಡಿಟ್‌ ಮ್ಯಾನೇಜರ್‌ ಮತ್ತು ಫೀಲ್ಡ್‌ ಅಸಿಸ್ಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಒಂದನೇ ಆರೋಪಿ ಪ್ರಕಾಶ್‌ ರವರು 5,40,487-00, ಎರಡನೇ ಆರೋಪಿ ಗಣೇಶರವರು 11,92,430-00 ಹಾಗೂ ಮೂರನೇ ಆರೋಪಿ ಸಾಗರ ಎಂಬವರು 3,06,498-00 ಒಟ್ಟು 20,39,415-00ರೂಪಾಯಿ ಹಣವನ್ನು ನೋಂದಣಿಯಾಗಿರುವ ಮಹಿಳೆಯರಿಗೆ ಸಾಲ ನೀಡಿ ಅವರಿಂದ ವಾರದ ಮರುಪಾವತಿ ಹಣವನ್ನು ಪಡೆದು ಸಾಲದ ಖಾತೆಗೆ ಜಮಾ ಮಾಡದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕಲಂ 406,409,420 R/W 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.

error: No Copying!