ಕಾರ್ಕಳ: ದಿನಾಂಕ :06-01-2025 (ಹಾಯ್ ಉಡುಪಿ ನ್ಯೂಸ್) ಎಂಆರ್ ಪಿಎಲ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1. 6 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಸುಚಿತ್ (29) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ ಮುಲ್ಲಡ್ಕ ಗ್ರಾಮದ ನಿವಾಸಿ ಸುಚಿತ್ (29) ಎಂಬವರು ಉದ್ಯೋಗ ಹುಡುಕುತ್ತಿದ್ದು ಮಂಗಳೂರು ಕದ್ರಿಯಲ್ಲಿರುವ ಸನ್ನಿಧಿ ಇಂಟಿರಿಯರ್ ಡಿಸೈನ್ ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಸುಚಿತ್ ರವರ ಗೆಳತಿಯ ಹತ್ತಿರ ಅವಳು ಕೆಲಸಕ್ಕೆ ಇದ್ದ ಸಂಸ್ಥೆಯ ಅವಿನಾಶ್ ಎಂಬಾತ ಮಂಗಳೂರು ಎಮ್‌ಆರ್‌ಪಿಎಲ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ತಮಗೆ ಹೇಳಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವರು ಸುಚಿತ್ ರವರಲ್ಲಿ ಈ ವಿಚಾರ ತಿಳಿಸಿದಾಗ, ಸುಚಿತ್ ರವರು ಅಪಾದಿತ ಅವಿನಾಶ್ ನ ಹತ್ತಿರ ಫೋನ್ ಮೂಲಕ ಮಾತನಾಡಿದಾಗ ರೂಪಾಯಿ 1,05,600/ ಹಣ ಕೊಡಬೇಕು ದಿನಾಂಕ 13/12/2024 ರಂದು ಕೆಲಸ ಕೊಡಿಸುತ್ತೇನೆಂದು ನಂಬಿಸಿದ್ದು, ಅಪಾದಿತ ಅವಿನಾಶ್ ನು ತಿಳಿಸಿದಂತೆ ದಿನಾಂಕ 18/11/2024 ರಿಂದ 26/12/2024 ರವರೆಗೆ ಆನ್‌ಲೈನ್ ಮೂಲಕ ಮತ್ತು ರೂಪಾಯಿ 20,000/- ಹಣವನ್ನು ನಗದಾಗಿ ಪಾವತಿಸಿದ್ದು, ಅಪಾದಿತ ಅವಿನಾಶ್ ನು ಮಂಗಳೂರು ಎಮ್‌ಆರ್‌ಪಿಎಲ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರೂಪಾಯಿ 1,05,600/- ಪಡೆದುಕೊಂಡು ಕೆಲಸವನ್ನು ಕೊಡಿಸದೇ ಮೋಸ ಮಾಡಿರುವುದಾಗಿ ಸುಚಿತ್ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 318(2), 318(4) BNS ರಂತೆ ಪ್ರಕರಣ ದಾಖಲಾಗಿದೆ.